ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ ಅರ್ಬನ್ ಬ್ಯಾಂಕ್: ವಹಿವಾಟು ಸ್ಥಗಿತಕ್ಕೆ ಆರ್‌ಬಿಐ ಸೂಚನೆ

Published 15 ಜೂನ್ 2024, 14:20 IST
Last Updated 15 ಜೂನ್ 2024, 14:20 IST
ಅಕ್ಷರ ಗಾತ್ರ

ಕಾರವಾರ: ದಿವಾಳಿ ಅಂಚಿನಲ್ಲಿರುವ ಇಲ್ಲಿನ ದಿ ಕಾರವಾರ ಅರ್ಬನ್ ಸಹಕಾರ ಬ್ಯಾಂಕ್‍ಗೆ ಮುಂದಿನ ಆರು ತಿಂಗಳ ಕಾಲ ಸಾಲ ವಸೂಲಾತಿಯ ಹೊರತಾಗಿ ಯಾವುದೇ ಆರ್ಥಿಕ ವಹಿವಾಟು ನಡೆಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಸೂಚಿಸಿದೆ.

‘ಆರ್.ಬಿ.ಐ ಅನುಮತಿ ಇಲ್ಲದೆ ಬ್ಯಾಂಕ್ ಯಾವುದೇ ಸಾಲ ಮತ್ತು ಮುಂಗಡಗಳನ್ನು ನೀಡಬಾರದು. ಹೊಸ ಠೇವಣಿಯನ್ನೂ ಸಂಗ್ರಹಿಸಬಾರದು. ಯಾವುದೇ ಹೂಡಿಕೆಯನ್ನು ಮಾಡಬಾರದು. ಜೂನ್ 12 ರಿಂದ ಮುಂದಿನ ಆರು ತಿಂಗಳವರೆಗೆ ಈ ಆದೇಶ ಪಾಲಿಸಬೇಕು’ ಎಂದು ಆರ್.ಬಿ.ಐನ ಚೀಫ್ ಜನರಲ್ ಮ್ಯಾನೇಜರ್ ಪುನೀತ ಪಂಚೋಲಿ ಹೊರಡಿಸಿದ ಸೂಚನಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಆಸ್ತಿ ಅಥವಾ ಸ್ವತ್ತುಗಳನ್ನು ಮಾರಾಟ ಮಾಡುವುದಾಗಲಿ, ವರ್ಗಾಯಿಸುವುದನ್ನಾಗಲಿ ಮಾಡಬಾರದು. ಸಿಬ್ಬಂದಿಯ ವೇತನ, ನಿರ್ವಹಣಾ ಶುಲ್ಕ ಪಾವತಿಯಂತಹ ಚಟುವಟಿಕೆ ಮಾತ್ರ ಕೈಗೊಳ್ಳಬಹುದು. ಬ್ಯಾಂಕಿನ ಉಳಿತಾಯ ಖಾತೆ, ಚಾಲ್ತಿ ಖಾತೆ ಅಥವಾ ಠೇವಣಿದಾರರ ಖಾತೆಯಿಂದ ಯಾವುದೇ ಮೊತ್ತವನ್ನು ಹಿಂಪಡೆಯಬಾರದು. ಬ್ಯಾಂಕ್ ಠೇವಣಿದಾರರ ಹಣ ಹಿಂದಿರುಗಿಸುವಷ್ಟು ಆಸ್ತಿ ಹೊಂದಿಲ್ಲದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ವಹಿವಾಟು ಸ್ಥಗಿತಗೊಳಿಸಬೇಕು’ ಎಂದು ಸೂಚಿಸಿದೆ.

ಕೆಲ ದಿನಗಳ ಹಿಂದಷ್ಟೆ ಬ್ಯಾಂಕಿಗೆ ₹54 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು ಘೋಷಿಸಿದ್ದರು. ಇದಾದ ಬಳಿಕ ಠೇವಣಿ ಮರಳಿಸುವಂತೆ ಗ್ರಾಹಕರು ಬ್ಯಾಂಕಿಗೆ ಮುಗಿಬೀಳತೊಡಗಿದ್ದಾರೆ. ಸಹಕಾರ ಇಲಾಖೆಯಿಂದ ತನಿಖೆ ಪ್ರಕ್ರಿಯೆಯೂ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT