ಶಿರಸಿ: ಶಿರಸಿ ಕುಮಟಾ ಹೆದ್ದಾರಿ (766-ಇ)ಯು ಸಂಚಾರದ ದೃಷ್ಟಿಯಿಂದ ಪ್ರಮುಖವಾಗಿದ್ದು, ತಕ್ಷಣ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ ಹೇಳಿದರು.

ಶಿರಸಿ ಕುಮಟಾ ರಸ್ತೆಯ ಬೆಣ್ಣೆಹೊಳೆ ಬಳಿ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿ ಈ ಮಾರ್ಗ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

ಬಳಿಕ ಗುತ್ತಿಗೆದಾರ ಆರ್ ಎನ್ ಎಸ್ ಕಂಪನಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ‘ಮಳೆಗಾಲ ಮುಂಚಿತವಾಗಿ ಆರಂಭವಾಗುತ್ತದೆ ಎಂಬುದನ್ನು ಹವಾಮಾನ ಇಲಾಖೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸೂಕ್ತ ಕಾರ್ಯ ಯೋಜನೆ ರೂಪಿಸಿಕೊಳ್ಳಬೇಕಿತ್ತು’ ಎಂದರು.

‘ಈಗ ಬದಲಿ ವ್ಯವಸ್ಥೆ ಹೇಗೆ ಎಂಬ ಬಗ್ಗೆ ಚಿಂತಿಸುವುದು ಅತ್ಯಗತ್ಯ. ಸಾಧ್ಯವಾದರೆ ತಾತ್ಕಾಲಿಕವಾಗಿ ನಿರ್ಮಿಸಿದ್ದ, ಕೊಚ್ಚಿಹೋದ ರಸ್ತೆಯನ್ನೂ ದುರಸ್ತಿ ಮಾಡಿಟ್ಟುಕೊಳ್ಳುವುದು ಉತ್ತಮ’ ಎಂದು ಸಲಹೆ ನೀಡಿದರು.

‘ಕೇವಲ ಬೆಣ್ಣೆಹೊಳೆ ಸೇತುವೆ ಮಾತ್ರ ಗಮನಿಸಬೇಡಿ. ಈ ಮಾರ್ಗದಲ್ಲಿ ಶಿರಸಿ ತಾಲ್ಲೂಕಿನ ಭಾಗದಲ್ಲಿ ಇನ್ನುಳಿದ ಸೇತುವೆ ನಿರ್ಮಾಣವಾಗುತ್ತಿದೆ. ಇಲ್ಲಿ ಬದಲಿ ರಸ್ತೆಯೇ ಇನ್ನೂ ಬಳಕೆಯಾಗುತ್ತಿದೆ. ಇದೂ ಕುಸಿತವಾಗುವ ಸಾಧ್ಯತೆ ಇರುವುದರಿಂದ ಈ ಬಗ್ಗೂ ಗಮನ ಹರಿಸಬೇಕು. ಸೂಕ್ತ ತಡೆಗೋಡೆ ನಿರ್ಮಿಸಿ ಕುಸಿಯದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಈ ವೇಳೆ ಮಾಹಿತಿ ನೀಡಿದ ಆರ್ ಎನ್ ಎಸ್ ಅಧಿಕಾರಿಗಳು, 'ಬೆಣ್ಣೆ ಹೊಳೆ ಸೇತುವೆಯ ಪಿಚಿಂಗ್ ಕಾಮಗಾರಿಯನ್ನು ತ್ವರಿತವಾಗಿ ಮಾಡುತ್ತಿದ್ದೇವೆ. ಈಗ ದ್ವಿಚಕ್ರ ವಾಹನ ದಾಟಲು ವ್ಯವಸ್ಥೆ ಮಾಡಿದ್ದೇವೆ. ಸೋಮವಾರದ ಒಳಗಡೆ ಸಣ್ಣ ವಾಹನಗಳು ದಾಟಿಸಲು ವ್ಯವಸ್ಥೆ ಮಾಡುತ್ತೇವೆ' ಎಂದು ಭರವಸೆ ನೀಡಿದರು.

ಉಪವಿಭಾಗಾಧಿಕಾರಿ ಕೆ.ವಿ. ಕಾವ್ಯಾರಾಣಿ, ತಹಶೀಲ್ದಾರ್ ಶಂಕರ ಗೌಡಿ, ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ ಇದ್ದರು.

Highlights - ಶಿರಸಿ ಕುಮಟಾ ರಸ್ತೆಯ ಬೆಣ್ಣೆಹೊಳೆ ಬಳಿ ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿರುವ ಸ್ಥಳಕ್ಕೆ ಸುಷ್ಮಾ ಗೋಡಬೋಲೆ ಆಗಮಿಸಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.