ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಿಯ ನೀರಿನಲ್ಲಿ ಪೆಟ್ರೋಲ್ ಮಿಶ್ರಿತ ವಾಸನೆ: ಜನರಲ್ಲಿ ಆತಂಕ, ಬಳಕೆಗೆ ನಿರ್ಬಂಧ

Published 8 ಡಿಸೆಂಬರ್ 2023, 7:02 IST
Last Updated 8 ಡಿಸೆಂಬರ್ 2023, 7:02 IST
ಅಕ್ಷರ ಗಾತ್ರ

ಶಿರಸಿ: ನಗರದ ಕೋಟೆಗಲ್ಲಿಯ ಸೌದಾಗರ ಓಣಿಯಲ್ಲಿರುವ ಸಾರ್ವಜನಿಕ ಬಾವಿಯ ನೀರಿನಲ್ಲಿ ಪೆಟ್ರೋಲ್ ಮಿಶ್ರಿತ ವಾಸನೆ ಬರುತ್ತಿರುವುದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಗುರುವಾರ ಬೆಳಿಗ್ಗೆ ಬಾವಿಯಿಂದ ನೀರು ಎತ್ತುವಾಗ ಪೆಟ್ರೋಲ್ ಹಾಗೂ ಡಿಸೈಲ್ ವಾಸನೆ ಬಂದಿರುವುದರಿಂದ ಸ್ಥಳೀಯರು ನಗರಸಭೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಾವಿಯ ಅನತಿ ದೂರದಲ್ಲಿಯೇ ಪೆಟ್ರೋಲ್ ಪಂಪ್ ಇದ್ದು, ಅಲ್ಲಿನ ಟ್ಯಾಂಕ್ ಸೋರಿಕೆಯಿಂದ ಪೆಟ್ರೋಲ್ ಮತ್ತಿ ಡಿಸೈಲ್ ಅಂಶ ಬಾವಿಗೆ ಸೇರಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಕೋಟೆಗಲ್ಲಿಯ ಚರ್ಚ್ ಎದುರಿನ ಸಾರ್ವಜನಿಕ ಬಾವಿಯ ನೀರು ಕಲುಷಿತಗೊಂಡು ಪೆಟ್ರೋಲ್ ವಾಸನೆ ಬರುತ್ತಿರುವುದರಿಂದ ಕುಡಿಯಲು ಮತ್ತು ಇನ್ನಿತರ ದಿನನಿತ್ಯದ ಬಳಕೆಗೆ ಯೋಗ್ಯವಿಲ್ಲ. ಬಾವಿಯ ನೀರನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ನಗರಸಭೆಯ ಮುಂದಿನ ಆದೇಶದವರೆಗೆ ಬಾವಿಯ ನೀರನ್ನು ಬಳಸಬಾರದು ಎಂದು ನಗರಸಭೆಯಿಂದ ನೋಟಿಸ್ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT