ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ ಜಿಲ್ಲೆಯ ರೈತರಿಗೆ ₹44.34 ಕೋಟಿ ಬೆಳೆವಿಮೆ ಮಂಜೂರು

Published 21 ಮೇ 2024, 14:01 IST
Last Updated 21 ಮೇ 2024, 14:01 IST
ಅಕ್ಷರ ಗಾತ್ರ

ಕಾರವಾರ: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ 2023–24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ ವಿಮೆ ಪಡೆದಿದ್ದ ಜಿಲ್ಲೆಯ 27,637 ರೈತರಿಗೆ ಒಟ್ಟು ₹44,34,77,748 ಮೊತ್ತದ ಬೆಳೆವಿಮೆ ಮಂಜೂರಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

‘ಪ್ರಕೃತಿ ವಿಕೋಪಗಳಿಂದ ಬೆಳೆ ವಿಫಲವಾದ ಹಿನ್ನೆಲೆಯಲ್ಲಿ ರೈತರಿಗೆ ಆರ್ಥಿಕ ಬೆಂಬಲ ಒದಗಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಮಪಾಲಿನ ನೆರವಿನ ಈ ಯೋಜನೆಯಡಿ, ವಿಮೆ ಪಡೆದಿದ್ದ ಜಿಲ್ಲೆಯ ರೈತರ ಖಾತೆಗೆ ನೇರವಾಗಿ ವಿಮೆ ಮೊತ್ತ ಪಾವತಿಯಾಗಿದೆ’ ಎಂದು ತಿಳಿಸಿದ್ದಾರೆ.

‘ಭಟ್ಕಳ ತಾಲ್ಲೂಕಿನ 271 ರೈತರಿಗೆ ₹1.54 ಲಕ್ಷ, ದಾಂಡೇಲಿಯ 103 ರೈತರಿಗೆ ₹4.63 ಲಕ್ಷ, ಹಳಿಯಾಳದ 8,883 ರೈತರಿಗೆ ₹5.35 ಕೋಟಿ, ಹೊನ್ನಾವರದ 84 ರೈತರಿಗೆ ₹36 ಸಾವಿರ, ಜೋಯಿಡಾದ 275 ರೈತರಿಗೆ ₹1.29 ಲಕ್ಷ, ಕುಮಟಾದ 57 ರೈತರಿಗೆ ₹50 ಸಾವಿರ, ಮುಂಡಗೋಡದ 7,041 ರೈತರಿಗೆ ₹20.28 ಕೋಟಿ, ಸಿದ್ದಾಪುರದ 421 ರೈತರಿಗೆ ₹3.59 ಲಕ್ಷ, ಶಿರಸಿಯ 9,123 ರೈತರಿಗೆ ₹17.72 ಕೋಟಿ, ಯಲ್ಲಾಪುರದ 1,379 ರೈತರಿಗೆ ₹86.32 ಲಕ್ಷ ಜಮಾ ಆಗಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT