ಕುಮಟಾ: ‘ಆರೋಗ್ಯ ವರ್ಧನೆಗೆ ಮ್ಯಾರಥಾನ್, ಕ್ರೀಡೆ ಸಹಕಾರಿ. ಕ್ರೀಡಾಕೂಟ, ಮ್ಯಾರಥಾನ್ಗೆ ಮುಂದಿನ ವರ್ಷದಿಂದ ಪ್ರಮುಖ ಆದ್ಯತೆ ನೀಡಲಾಗುವುದು’ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಕುಮಟಾದಲ್ಲಿ ರೋಟರಿ ಕ್ಲಬ್ ಹಾಗೂ ಹೆಲ್ತ್ ಪಾಯಿಂಟ್ ವ್ಯಾಯಾಮ ಶಾಲೆ ವತಿಯಿಂದ ಭಾನುವಾರ ಆಯೋಜಿಸಿದ್ದ ‘ರನ್ ದಿ ಕೋಸ್ಟ್-26’ ಮ್ಯಾರಥಾನ್ 5 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

ಸಾಮಾಜಿಕ ಕಾರ್ಯಕರ್ತ ಶಶಿಭೂಷಣ ಹೆಗಡೆ ಮಾತನಾಡಿ, ‘ಜಿಲ್ಲೆಯ ಕರಾವಳಿಯಲ್ಲಿ ಮುಂದಿನ ವರ್ಷ ಐ.ಎ.ಎಫ್ ಪ್ರಮಾಣಿತ ಪೂರ್ಣ ಪ್ರಮಾಣದ ಮ್ಯಾರಥಾನ್ ಓಟದ ಸ್ಪರ್ಧೆಯ ಸಿದ್ಧತೆಗೆ ಈ ವರ್ಷದ ಸ್ಪರ್ಧೆ ಪೂರಕವಾಗಿದೆ. ಕುಮಟಾದಲ್ಲಿ ಹೊರಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಾಣದ ಬಗ್ಗೆ ಶಾಸಕರು ಎಲ್ಲ ಪ್ರಯತ್ನ ನಡೆಸಬೇಕು’ ಎಂದು ತಿಳಿಸಿದರು.

ರಾಜ್ಯ ದೇಹದಾರ್ಢ್ಯ ಸಂಸ್ಥೆ ಪ್ರಧಾನ ಕಾರ್ಯಕದರ್ಶಿ ಜಿ.ಡಿ.ಭಟ್ಟ, ಕ್ರೀಡಾ ಮಾರ್ಗದರ್ಶಕಿ ನಮಿತಾ ಸಾರಂಗ, ರೋಟರಿ ಕ್ಲಬ್ ಅಧ್ಯಕ್ಷ ಕಿರಣ ನಾಯಕ, ಕಾರ್ಯದರ್ಶಿ ನಿಖಿಲ್ ಕ್ಷೇತ್ರಪಾಲ, ಪದಾಧಿಕಾರಿಗಳಾದ ಅಥುಲ್ ಕಾಮತ್, ಎನ್.ಆರ್. ಗಜು, ಚೇತನ ಶೇಟ್, ಮಹೇಶ ಕಲ್ಯಾಣಪುರ, ಗುರುಪ್ರಸಾದ್ ಕಾಮತ್, ಹೆಲ್ತ್ ಪಾಂಯಿಟ್ ಮಾಲೀಕ ಅನಿಲ ನಾಯ್ಕ ಇದ್ದರು.

ವಿಜೇತರ ಪಟ್ಟಿ 21 ಕಿ.ಮೀ. ಓಟ: ಪುರುಷರ ವಿಭಾಗದಲ್ಲಿ ಆಕಾಶ ನಾಯ್ಕ ಗಣಪತಿ ಮಲಿಕ್ (ಪ್ರಥಮ) ಜಯಂತ ಪಟಗಾರ ಸಂದೀಪ ಪೂಜಾರಿ (ದ್ವಿತೀಯ) ದರ್ಶನ ನಾಯ್ಕ ದಿಲೀಪ್ ನಾಯ್ಕ ಅವರು ತೃತೀಯ ಸ್ಥಾನ ಹಾಗೂ ಮಹಿಳೆಯರ ವಿಭಾಗದಲ್ಲಿ ಸೌಮ್ಯ ಸುಪ್ರಿಯಾ ಹಾಗೂ ಮಧುಶ್ರೀ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು. ವಿಜೇತರಿಗೆ ಕ್ರಮವಾಗಿ ₹21 ಸಾವಿರ ₹15 ಸಾವಿರ ₹10 ಸಾವಿರ ನಗದು ಬಹುಮಾನ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು. ಪಟ್ಟಣದ ಹೆಲ್ತ್ ಪಾಯಿಂಟ್ ವ್ಯಾಯಾಮ ಶಾಲೆಯಿಂದ ಆರಂಭವಾದ ರನ್ ದಿ ಕೋಸ್ಟ್ -26 ಮ್ಯಾರಥಾನ್ 21 ಕಿ.ಮೀ. ಓಟದ ಸ್ಪರ್ಧೆ ತಾಲ್ಲೂಕಿನ ಬಾಡದವರೆಗೆ ನಡೆಯಿತು. ವಿವಿಧ ಜಿಲ್ಲೆಗಳ ಸ್ಪರ್ಧಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.