ಕಾರವಾರ: ‘ಸಮಾನ ಹಕ್ಕು ಸುಲಭವಾಗಿ ಸಿಗುವ ಕಾಲಮಾನ ಇದಲ್ಲ. ಇದಕ್ಕಾಗಿ ಹಿಂದುಳಿದ ಸಮುದಾಯಗಳೆಲ್ಲ ಒಟ್ಟಾಗಿ ಗಟ್ಟಿ ಧ್ವನಿಯಲ್ಲಿ ಕೇಳಬೇಕು. ಅಂತಹ ಅವಕಾಶವನ್ನು ಜಾತಿ ಜನಗಣತಿ ನಡೆಸುವ ಮೂಲಕ ಕೇಂದ್ರ ಸರ್ಕಾರ ಒದಗಿಸಲು ಮುಂದಾಗಿದೆ’ ಎಂದು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರತಿಪಾದಿಸಿದರು.

ಇಲ್ಲಿನ ಸದಾನಂದ ಪ್ಯಾಲೇಸ್ ಸಭಾಭವನದಲ್ಲಿ ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯು ಭಾನುವಾರ ಹಮ್ಮಿಕೊಂಡಿದ್ದ ಜಾತಿ ಜನಗಣತಿ ಹಿನ್ನೋಟ–ಮುನ್ನೋಟ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಜನಸಂಖ್ಯೆ ಆಧಾರಿತವಾಗಿ ಸಣ್ಣ ಸಮುದಾಯಗಳಿಗೆ ಅವಕಾಶ ಕಲ್ಪಿಸುವುದು ಕೇಂದ್ರ ಸರ್ಕಾರ ನಡೆಸಲಿರುವ ಜಾತಿ ಜನಗಣತಿಯ ಉದ್ದೇಶ. 90 ವರ್ಷಗಳ ಬಳಿಕ ಇಂತಹದೊಂದು ಸಾಹಸಕ್ಕೆ ಸರ್ಕಾರ ಕೈಹಾಕಿದೆ’ ಎಂದರು.

‘ರಾಜ್ಯದಲ್ಲಿ ಶೇ 50ರಷ್ಟು ಜನರು ಹಿಂದುಳಿದ ವರ್ಗಕ್ಕೆ ಸೇರಿದವರು. ಆದರೆ, ಈ ಸಮುದಾಯಗಳಿಗೆ ಸೌಲಭ್ಯ, ಪ್ರಾತಿನಿಧ್ಯ ನಿರೀಕ್ಷಿತಮಟ್ಟದಲ್ಲಿ ಸಿಗುತ್ತಿಲ್ಲ ಎಂಬ ಬೇಸರವಿದೆ’ ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಪರಕೀಯರ ಪ್ರಭಾವದ ಕಾರಣದಿಂದ ನಮ್ಮತನ ಮರೆತಿದ್ದೇವೆ. ಮಹಾನ್ ನಾಯಕರೆಲ್ಲ ಜಾತಿಯಿಂದ ಶ್ರೇಷ್ಠರಾದವರಲ್ಲ. ಸಾಧನೆಯ ಫಲದಿಂದ ಶ್ರೇಷ್ಠತೆ, ಅರ್ಹತೆ ಒಲಿಯುತ್ತದೆ. ಕಾಂಗ್ರೆಸ್ ಗುಲಾಮಿತನದ ಗುಣ ಜನರಲ್ಲಿ ತುಂಬಲು ಪ್ರಯತ್ನಿಸಿತು. ಬೇಧಭಾವದ ಸಮಾಜ ನಿರ್ಮಿಸಿದ್ದು ಅವರ ಕೆಟ್ಟ ಸಾಧನೆ’ ಎಂದರು.

ಆರ್.ಎಸ್.ಎಸ್ ಸಾಮರಸ್ಯ ವಿಭಾಗದ ಪ್ರಮುಖ ವಾದಿರಾಜ, ‘ಸಿದ್ದರಾಮಯ್ಯ ಸರ್ಕಾರ ನಡೆಸಿದ್ದ ಜಾತಿ ಜನಗಣತಿಯನ್ನು ಕಾಂಗ್ರೆಸ್ ನಾಯಕರೇ ಒಪ್ಪಲು ಸಿದ್ದರಿಲ್ಲ. ಜನಸಾಮಾನ್ಯರ ತೆರಿಗೆ ಹಣ ಪೋಲು ಮಾಡಿ ಗಣತಿ ಮಾಡಿದ ಕಾಂತರಾಜ ಆಯೋಗ ಸೂಕ್ತ ವರದಿ ನೀಡಿದ್ದೇ ಅನುಮಾನ’ ಎಂದರು.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ‘ಕೇಂದ್ರ ಸರ್ಕಾರ ಜನರನ್ನು ಸಾಮಾಜಿಕವಾಗಿ ಮುನ್ನೆಲೆಗೆ ತರುವ ಜಾತಿ ಜನಗಣತಿ ನಡೆಸಲಿದೆ ಎಂಬ ವಿಶ್ವಾಸ ಜನಸಾಮಾನ್ಯರಲ್ಲೂ ಇದೆ’ ಎಂದರು.

ಶಾಸಕ ದಿನಕರ ಶೆಟ್ಟಿ, ಬಿಜೆಪಿ ಮುಖಂಡರಾದ ಶಿವಾನಂದ ನಾಯ್ಕ, ಸುನೀಲ ಹೆಗಡೆ, ಸುನೀಲ ನಾಯ್ಕ, ಕೆ.ಜಿ.ನಾಯ್ಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್.ಹೆಗಡೆ, ರಾಜೇಂದ್ರ ನಾಯ್ಕ ಇದ್ದರು.

ಸಾಮಾಜಿಕವಾಗಿ ಹಿಂದುಳಿದವರನ್ನು ಮೇಲಸ್ತರಕ್ಕೆ ತರುವುದು ನಿಜವಾದ ಪೂಜೆ. ಬಡವರನ್ನು ಆರ್ಥಿಕವಾಗಿ ಬಲಾಢ್ಯಗೊಳಿಸುವುದು ಸರ್ಕಾರದ ಜವಾಬ್ದಾರಿ
ಭವೇಶಾನಂದ ಸ್ವಾಮೀಜಿ ರಾಮಕೃಷ್ಣಾಶ್ರಮದ ಮಹಾಂತ

ಮರಳು ಮಾಡುವ ಯತ್ನ:

‘ತನ್ನನ್ನು ತಾನು ಸಾಮಾಜಿಕ ಹರಿಕಾರ ಎಂದುಕೊಳ್ಳುವ ಸಿದ್ದರಾಮಯ್ಯ ಕೂಡ ಹತ್ತು ವರ್ಷಗಳ ಹಿಂದೆ ಜಾತಿ ಜನಗಣತಿ ನಡೆಸಿದ್ದರು. ಇದಕ್ಕಾಗಿ ಕಾಂತರಾಜ ಆಯೋಗ ರಚಿಸಿದ್ದರು. ಈ ಆಯೋಗ ನೀಡಿದ ವರದಿಗೆ ಸರ್ಕಾರದ ಪದನಿಮಿತ್ತ ಕಾರ್ಯದರ್ಶಿಯೇ ಸಹಿ ಮಾಡಿರಲಿಲ್ಲ. ಜನರ ತೆರಿಗೆ ಹಣವನ್ನು ಪೋಲು ಮಾಡಿ ವೈಜ್ಞಾನಿಕವಲ್ಲದ ರೀತಿಯಲ್ಲಿ ಗಣತಿ ನಡೆಸಲಾಗಿತ್ತು. ಈಗ ಇನ್ನೊಮ್ಮೆ ಜಾತಿ ಜನಗಣತಿ ನಡೆಸುವುದಾಗಿ ಜನರನ್ನು ಸಿದ್ದರಾಮಯ್ಯ ಮರಳು ಮಾಡುತ್ತಿದ್ದಾರೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.