ಕಾರವಾರ: ತ್ಯಾಗ, ಬಲಿದಾನದ ಸಂಕೇತವಾಗಿ ಮುಸ್ಲಿಮರು ಆಚರಿಸುವ ಬಕ್ರೀದ್ಗೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸಿದ್ಧತೆ ಜೋರಾಗಿ ನಡೆದಿದ್ದು, ಕುರಿಗಳ ವಹಿವಾಟು ತುರುಸು ಪಡೆದುಕೊಂಡಿದೆ.

ಇಲ್ಲಿನ ಕಾಜುಬಾಗ, ಕೋಡಿಬಾಗ, ಗಾಂಧಿನಗರ, ಸದಾಶಿವಗಡ ಸೇರಿದಂತೆ ಹಲವೆಡೆಗಳಲ್ಲಿ ಕುರಿಗಳ ಮಾರಾಟ ನಡೆಯುತ್ತಿದೆ. ವಿವಿಧ ಬಗೆಯ, ಗಾತ್ರಗಳ ಕುರಿಗಳನ್ನು ಖರೀದಿಸುವಲ್ಲಿ ಜನರು ನಿರತರಾಗಿದ್ದಾರೆ. ದೇವದುರ್ಗ, ಅಮೀನಗಡ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ನಾನಾ ಭಾಗದಿಂದ ಕುರಿಗಳನ್ನು ತಂದು ಮಾರಾಟಕ್ಕಿರಿಸಲಾಗಿದೆ.

ಬಕ್ರೀದ್ ಹಬ್ಬಕ್ಕೆ ಬಲಿದಾನದ ಸಂಕೇತವಾಗಿ ಕುರಿಗಳನ್ನು ಬಲಿ ಕೊಡುವ ಪದ್ಧತಿ ನಡೆಯುತ್ತದೆ. ಪ್ರವಾದಿಯವರ ಆಣತಿಯಂತೆ ಸ್ಥಿತಿವಂತರು ಮನೆಯಲ್ಲಿ ಕುರಿಯ ರೂಪದಲ್ಲಿ ಬಲಿದಾನ ಅರ್ಪಿಸುತ್ತಾರೆ. ಅದನ್ನು ಮೂರು ಪಾಲು ಮಾಡಿ ಬಡವರಿಗೆ, ಬಂಧುಗಳ, ನೆರೆಹೊರೆಯವರಿಗೆ ಹಂಚಿಕೆ ಮಾಡಲಾಗುತ್ತದೆ. ಜೂನ್ 7 ರಂದು ಆಚರಣೆ ನಡೆಯಲಿದ್ದು, ಹಬ್ಬಕ್ಕೆ ನಾಲ್ಕೈದು ದಿನ ಮುಂಚಿನಿಂದ ಕುರಿಗಳ ವಹಿವಾಟು ಚಿಗಿತುಕೊಂಡಿದೆ.

‘ಕಳೆದ ಬಾರಿಗಿಂತ ಈ ಬಾರಿ ವಿಭಿನ್ನ ತಳಿಗಳ ಕುರಿಗಳು ಮಾರಾಟಕ್ಕೆ ಬಂದಿವೆ. ಗಾತ್ರಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗುತ್ತಿದೆ. ಕೆಲ ವ್ಯಾಪಾರಿಗಳು ದುಬಾರಿ ದರ ಹೇಳಿ ಚೌಕಾಸಿ ಬಳಿಕ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ’ ಎಂದು ಕೆಎಚ್ಬಿ ಕಾಲೊನಿಯ ಶಾರುಕ್ ಹಸನ್ ಹೇಳಿದರು.

‘₹20 ಸಾವಿರದಿಂದ ಆರಂಭಗೊಂಡು ₹60 ಸಾವಿರ ದರದವರೆಗಿನ ಕುರಿಗಳನ್ನು ಮಾರಾಟಕ್ಕಿರಿಸಲಾಗಿದೆ. ಖರೀದಿ ಪ್ರಮಾಣ ಸಮಾಧಾನಕರವಾಗಿದೆ. ಇನ್ನೂ ಎರಡು ದಿನ ಸಮಯವಿದ್ದು ಮತ್ತಷ್ಟು ಕುರಿಗಳು ಮಾರಾಟವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ವ್ಯಾಪಾರಿ ಇಮ್ರಾನ್ ಶೇಖ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.