ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಗ್ರಾಮೀಣ ಪ್ರದೇಶಕ್ಕೆ ಶೀಘ್ರದಲ್ಲಿ ಮೊಬೈಲ್ ನೆಟ್‍ವರ್ಕ್‌: ಕಾಗೇರಿ

4ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಅಡಿ ಟವರ್ ನಿರ್ಮಾಣ ಕಾರ್ಯಕ್ರಮದಲ್ಲಿ ಕಾಗೇರಿ
Published : 16 ಆಗಸ್ಟ್ 2024, 14:10 IST
Last Updated : 16 ಆಗಸ್ಟ್ 2024, 14:10 IST
ಫಾಲೋ ಮಾಡಿ
Comments

ಶಿರಸಿ: 4ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಅಡಿಯಲ್ಲಿ ತಾಲ್ಲೂಕಿನ ಕಳವೆಯ ಹಂದಿಜಡ್ಡಿಯಲ್ಲಿ ನಿರ್ಮಾಣಗೊಂಡ ಬಿಎಸ್‌ಎನ್‌ಎಲ್ ಟವರ್‌ನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು, ಮಲೆನಾಡು ಗುಡ್ಡುಗಾಡು ಪ್ರದೇಶದಲ್ಲಿ ನೆಟ್‌ವರ್ಕ್ ಇಲ್ಲದ ಸ್ಥಳಗಳಲ್ಲಿ ನೆಟ್‌ವರ್ಕ್ ನೀಡುವ ಉದ್ದೇಶದಿಂದ ಯುಎಸ್‌ಎಫ್‌ಒ ಯೋಜನೆಯಲ್ಲಿ ಟವರ್ ನಿರ್ಮಾಣಕ್ಕೆ ಚಾಲನೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 233, 4ಜಿ ಟವರ್‌ಗಳನ್ನು ಕಾರ್ಯಾರಂಭ ಮಾಡಲು ಯೋಚಿಸಲಾಗಿದ್ದು, ಸುಮಾರು 11 ಟವರ್‌ಗಳನ್ನು ಹೊಸ 4ಜಿ ಅಳವಡಿಸಲಾಗಿದೆ. ಶಿರಸಿ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸೂಪಾ, ಹಳಿಯಾಳ, ಯಲ್ಲಾಪುರ ಭಾಗದಲ್ಲಿ 242 ಸ್ಥಳಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಅರಣ್ಯ ಜಾಗದಲ್ಲಿ 161 ಹಾಗೂ ಇತರೆ 81 ಜಾಗವನ್ನು ಗುರುತಿಸಲಾಗಿದೆ. 78 ಸ್ಥಳಗಳಲ್ಲಿ ಭೂಮಿ ಮಂಜೂರಿ ಮಾಡಿ ಕಾಮಗಾರಿ ಆರಂಭಿಸಲಾಗಿದೆ. ಪ್ರಸ್ತುತ 59 ಟವರ್‌ಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ಬಿಎಸ್‌ಎನ್‌ಎಲ್ ಟವರ್‌ಗಳು ಸ್ಥಗಿತಗೊಳ್ಳುತ್ತಿದೆ ಎಂಬ ದೂರು ಬಂದ ಹಿನ್ನೆಲೆ ದೂರ ಸಂಪರ್ಕ ಇಲಾಖೆ ಸಚಿವರ ಭೇಟಿಯಾಗಿ ಹೊಸ ಬ್ಯಾಟರಿ ಮತ್ತು ಜನರೇಟರ್ ನೀಡಲು ವಿನಂತಿಸಿದ್ದೇನೆ. ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಮಂಜೂರಾತಿ ನೀಡಿದ್ದಾರೆ. ಸದ್ಯದಲ್ಲಿಯೇ ಅಳವಡಿಸುವಂತೆ ಬಿಎಸ್‌ಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.

ಅರಣ್ಯ ಜಾಗದಲ್ಲಿ ಟವರ್ ನಿರ್ಮಾಣಕ್ಕೆ ಸಮಸ್ಯೆಯಾಗುತ್ತಿದೆ. ಅದನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ. ಕೆಲ ಪ್ರದೇಶದಲ್ಲಿ ಜಾಗದ ಸಮಸ್ಯೆ ನಿವಾರಣೆಯಾಗಿದೆ. ಗ್ರಾಮೀಣ ಭಾಗಗಳಲ್ಲಿ ನೆಟ್‌ವರ್ಕ್ ಉತ್ತಮಗೊಳಿಸಲು ಹಂತ ಹಂತವಾಗಿ ಟವರ್ ನಿರ್ಮಾಣ ಮಾಡಲಾಗುತ್ತದೆ ಎಂದರು.

ಬಿಎಸ್‌ಎನ್‌ಎಲ್ ಅಧಿಕಾರಿಗಳಾದ ನವೀನಕುಮಾರ ಗುಪ್ತಾ, ಬಿಂದು ಸಂತೋಷ, ಅವಿನಾಶ ಪೂಜಾರ, ವಿಕ್ರಮ್, ನಾಗರಾಜ, ಸಂತೋಷ ಚೌವ್ಹಾಣ್, ಸ್ಥಳೀಯರಾದ ಶಿವಾನಂದ ಕಳವೆ, ಆರ್.ಡಿ.ಹೆಗಡೆ ಜಾನ್ಮನೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT