ಶಿರಸಿ: ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘಗಳ ಸಂಖ್ಯೆ ಹೆಚ್ಚಳ, ಜಾನುವಾರುಗಳ ಚರ್ಮಗಂಟು ಕಾಯಿಲೆ ನಿಯಂತ್ರಣ, ಹೈನುಗಾರಿಕೆಯಲ್ಲಿ ಆಧುನಿಕ ಸಲಕರಣೆಗಳ ಬಳಕೆಯ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಲ್ಲಿ ಹಾಲು ಉತ್ಪಾದನೆ ಪ್ರಮಾಣ ದ್ವಿಗುಣವಾಗಿದೆ.

ಕೆಲವು ವರ್ಷಗಳಿಂದ ಹಾಲು ಉತ್ಪಾದನೆ ಕ್ಷೀಣವಾಗುತ್ತಿರುವ ಬಗ್ಗೆ ಜಿಲ್ಲೆಯಲ್ಲಿ ಕಳವಳ ವ್ಯಕ್ತವಾಗಿತ್ತು. ರೈತರ ಕೊಟ್ಟಿಗೆಯಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆ ಆಗುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಆದರೀಗ ಜಿಲ್ಲೆಯ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಹಾಲಿನ ಶೇಖರಣೆ ಅಂಕಿ-ಸಂಖ್ಯೆ ಅವಲೋಕಿಸಿದರೆ ಪ್ರಥಮ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಹಾಲಿನ ಉತ್ಪಾದನೆ ಆಗುತ್ತಿರುವುದು ಸಮಾಧಾನಕರ ಬೆಳವಣಿಗೆಯಾಗಿದೆ. 2023–24ನೇ ಸಾಲಿನಲ್ಲಿ ನಿತ್ಯ ಸರಾಸರಿ 40 ಸಾವಿರ ಲೀಟರ್ ಹಾಲಿನ ಉತ್ಪಾದನೆ ಜಿಲ್ಲಾ ವ್ಯಾಪ್ತಿಯಲ್ಲಿ ಆಗುತ್ತಿದ್ದು, ಪ್ರಸಕ್ತ ವರ್ಷ ನವೆಂಬರ್ ಆರಂಭದಲ್ಲಿ ನಿತ್ಯ 80 ಸಾವಿರ ಲೀಟರ್ ಗಡಿ ದಾಟಿದೆ. ಇದು ಜಿಲ್ಲೆಯ ಪ್ರತ್ಯೇಕ ಹಾಲು ಒಕ್ಕೂಟದ ಬೇಡಿಕೆಗೆ ಬಲ ನೀಡಿದೆ.

ಜಿಲ್ಲೆಯಲ್ಲಿ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘಗಳು ಹಾಗೂ ಸಾಮಾನ್ಯ ಸಂಘಗಳು ಸೇರಿ 303 ಹಾಲು ಸಂಘಗಳಾಗಿವೆ. ಅದರಲ್ಲಿ ಮಹಿಳಾ ಸಂಘಗಳು 103 ಹಾಗೂ ಸಾಮಾನ್ಯ ಸಂಘಗಳು 200 ಇವೆ. ಇದರಲ್ಲಿ ಹಾಲು ಉತ್ಪಾದಕ ಮಹಿಳಾ ಸಂಘಗಳಿಂದ 25 ಸಾವಿರ ಲೀಟರ್ ಹಾಗೂ ಸಾಮಾನ್ಯ ಸಂಘಗಳಿಂದ 55 ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮಹಿಳಾ ಸಂಘಗಳಲ್ಲಿ 2,968 ಹಾಲು ಉತ್ಪಾದಕರಿದ್ದು, ಸಾಮಾನ್ಯ ಸಂಘಗಳಲ್ಲಿ 8 ಸಾವಿರ ಸದಸ್ಯರಿದ್ದಾರೆ.

‘ಜಿಲ್ಲೆಯಲ್ಲಿ 2020ರ ಆಸುಪಾಸು ಬರಗಾಲದ ಸನ್ನಿವೇಶವಿತ್ತು. ನಂತರದ ಮೂರು ವರ್ಷಗಳಿಂದ ಹಾಲಿನ ಉತ್ಪಾದನೆಯಲ್ಲಿ ಇಳಿಮುಖವಾಗಲು ಜಾನುವಾರುಗಳಿಗೆ ಅಂಟಿದ ಚರ್ಮಗಂಟು ರೋಗ ದೊಡ್ಡ ಹೊಡೆತ ನೀಡಿತ್ತು. ಈ ರೋಗದಿಂದ ಹಾಲಿನ ಉತ್ಪಾದನೆ ಕ್ಷೀಣವಾಗಿತ್ತು. ಸಾಕಷ್ಟು ಕಡೆಗಳಲ್ಲಿ ಜಾನುವಾರುಗಳು ಈ ರೋಗದಿಂದ ಬಳಲಿದ್ದಲ್ಲದೇ ಸಾವಿಗೂ ಕಾರಣವಾಗಿತ್ತು. ಆದರೆ ಕಳೆದೊಂದು ವರ್ಷದಿಂದ ಈ ರೋಗ ಗಣನೀಯ ಇಳಿಕೆ ಕಂಡಿದೆ. ಇದು ಕೂಡ ಜಾನುವಾರುಗಳಲ್ಲಿ ಹಾಲಿನ ಇಳುವರಿ ಹೆಚ್ಚಲು, ಪಶುಸಂಗೋಪಕರು ಜಾನುವಾರುಗಳನ್ನು ಸಾಕಲು ಉತ್ಸಾಹ ತೋರುವಂತಾಗಿದೆ’ ಎನ್ನುತ್ತಾರೆ ಹೈನುಗಾರರು.

‘2020ರಲ್ಲಿ ಜಿಲ್ಲೆಯಲ್ಲಿ ಕೇವಲ 60 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳು ಇದ್ದವು. ಅದೀಗ 103 ಆಗಿದೆ. ಜಾನುವಾರುಗಳ ಸಂಖ್ಯೆ ಕಡಿಮೆಯಾದರೂ ಹೆಚ್ಚಿನ ಪ್ರಮಾಣದ ಹಾಲು ನೀಡುವ ಜಾನುವಾರುಗಳನ್ನು ಹೈನುಗಾರರು ಕಟ್ಟುತ್ತಿದ್ದಾರೆ. ಇದು ಕೂಡ ಹಾಲಿನ ಉತ್ಪಾದನೆ ಹೆಚ್ಚಲು ಕಾರಣವಾಗಿದೆ. ಒಕ್ಕೂಟದಿಂದ ರಸಮೇವು, ರಿಯಾಯಿತಿ ದರದಲ್ಲಿ ಪಶು ಆಹಾರ ವಿತರಣೆ, ಹೈನುಗಾರಿಕೆ ಮಾಡಲು ವಿವಿಧ ಉಪಕರಣಗಳನ್ನು ನೀಡುತ್ತಿದ್ದು, ಇವುಗಳನ್ನು ಬಳಸಿಕೊಂಡು ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ’ ಎಂದು ಧಾಮುಲ್ ಪ್ರಭಾರ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದರು.

ಹೈನುಗಾರಿಕೆ ಕುರಿತು ಜನಜಾಗೃತಿ ಪೂರಕ ಕಿಟ್ ಮತ್ತು ಒಕ್ಕೂಟದಿಂದ ವಿವಿಧ ಸೌಲಭ್ಯ ನೀಡುತ್ತಿರುವ ಕಾರಣ ಇಂದು ಹಾಲಿನ ಉತ್ಪಾದನೆಯಲ್ಲಿ ಜಿಲ್ಲೆ ಗಣನೀಯ ಪ್ರಗತಿ ಸಾಧಿಸುತ್ತಿದೆ

ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಪ್ರಭಾರ ಅಧ್ಯಕ್ಷ ಧಾಮುಲ್

ಒಕ್ಕೂಟದಿಂದ ಪ್ರೋತ್ಸಾಹಧನ

ನೂತನ ಸಂಘಗಳಿಗೆ ಆರಂಭದಲ್ಲಿ ಹಾಲು ಶೇಖರಣೆಗೆ ಬೇಕಾಗುವ ಉಪಕರಣಗಳನ್ನು ಹೊಂದಲು ಧಾರವಾಡ ಹಾಲು ಒಕ್ಕೂಟವು ₹25 ಸಾವಿರ ಅನುದಾನ ನೀಡುತ್ತಿದೆ. ಇದರಿಂದ ಹಾಲು ಶೇಖರಣೆಗೆ ಬೇಕಾದ ಉಪಕರಣಗಳನ್ನು ಹೊಂದಲು ಅನುಕೂಲವಾಗುತ್ತಿದೆ. ಒಟ್ಟಾರೆ ಈ ಸಂಘಗಳಿಗೆ ಮೂಲಸೌಲಭ್ಯ ಹೊಂದಲು ಒಕ್ಕೂಟ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ ಹೊಸ ಸಂಘಗಳು ಹುಟ್ಟುತ್ತಿವೆ' ಎಂಬುದು ಹೈನುಗಾರರ ಮಾತು.