ಶಿರಸಿ: ‘ನಿತ್ಯ ಶಾಲೆ, ಕಾಲೇಜಿಗೆ ಮಕ್ಕಳು ನಡೆದುಕೊಂಡು ಹೋಗುವಾಗ ಶಿಥಿಲ ಸೇತುವೆ ದಾಟಿಯೇ ಮುಂದೆ ಸಾಗಬೇಕು. ಸ್ವಲ್ಪ ಆಚೀಚೆಯಾದರೆ ರಕ್ಷಣಾ ಕಂಬಗಳೂ ಇಲ್ಲದ ಕಾರಣ ಹೊಳೆ ನೀರಿನೊಂದಿಗೆ ಕೊಚ್ಚಿಹೋಗುತ್ತವೆಂಬ ಆತಂಕ ಕಾಡುತ್ತದೆ’

ಇದು ತಾಲ್ಲೂಕಿನ ಕುದ್ರಗೋಡ, ಕೆಳಾಸೆ ಭಾಗದ ಪಾಲಕರ ಆತಂಕದ ಮಾತು. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳವಾದ ಸಾಲ್ಕಣಿಯಿಂದ ಈ ಗ್ರಾಮಗಳು 8 ಕಿ.ಮೀ ದೂರದಲ್ಲಿವೆ. ಬಸ್ ಹತ್ತಲು ಸಾಲ್ಕಣಿವರೆಗೆ ಬರಲೇಬೇಕು. ಅನಾರೋಗ್ಯ ಪೀಡಿತರನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ತರುವ ಪರಿಸ್ಥಿತಿ ಇದೆ. ಬಸ್, ಮೊಬೈಲ್ ನೆಟ್ವರ್ಕ್, ಸರ್ವ ಋತು ರಸ್ತೆ ಕೊರತೆಯಿದೆ. ಕಾಲುಸಂಕಗಳ ಅಗತ್ಯತೆಯೂ ಸಾಕಷ್ಟಿದೆ. ಇಂಥ ಸ್ಥಿತಿಯಲ್ಲಿರುವ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಈ ಹಿಂದೆ ನಿರ್ಮಿಸಿದ್ದ ಬಾಂದಾರ ಸಹಿತ ಸೇತುವೆ ದುಸ್ತಿತಿಯಲ್ಲಿದ್ದು, ಹೊರ ಊರಿನ ಸಂಪರ್ಕ ಸಾಧಿಸಲು ಗ್ರಾಮಸ್ಥರು ನಿತ್ಯ ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ.

‘ಎರಡು ದಶಕಗಳಿಗಿಂತ ಮೊದಲು ಕುದ್ರಗೋಡ ಹೊಳೆಗೆ ಬಾಂದಾರ ಸಹಿತ ಸೇತುವೆ ನಿರ್ಮಿಸಲಾಗಿತ್ತು. ಆರಂಭದಲ್ಲಿಯೇ ಸೇತುವೆಯ ಎತ್ತರ ಹಾಗೂ ಅಗಲ ತೀರಾ ಕಡಿಮೆಯಿದ್ದ ಕಾರಣ ಆಕ್ಷೇಪ ವ್ಯಕ್ತವಾಗಿತ್ತಾದರೂ ಕ್ರಮೇಣ ಅದೇ ಮಾರ್ಗದಲ್ಲಿ ಅನಿವಾರ್ಯವಾಗಿ ಗ್ರಾಮಸ್ಥರು ಸಂಚರಿಸುತ್ತಿದ್ದರು. ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು, ಅಕ್ಕಪಕ್ಕದಲ್ಲಿ ನಿರ್ಮಿಸಿದ್ದ ರಕ್ಷಣಾ ಕಂಬಗಳು ನಾಶವಾಗಿವೆ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಸೇತುವೆಯ ಎತ್ತರ ಕಡಿಮೆ ಇಡಲಾಗಿದೆ. ಸಾಧಾರಣ ಮಳೆಯಾದರೂ ಸೇತುವೆ ಮುಳುಗುತ್ತದೆ. ಜೋರು ಮಳೆಯಾದ ವೇಳೆ ಕಸಕಡ್ಡಿ, ಮರದ ದಿಮ್ಮಿಗಳು ಸೇತುವೆಗೆ ಧಕ್ಕೆ ತರುತ್ತವೆ. ಜೋರಾದ ಗಾಳಿ ಮಳೆ ಸಂದರ್ಭದಲ್ಲಿ ಸೇತುವೆ ಮೇಲೆ ಸಾಗುವದೇ ಅಪಾಯ. ಮಳೆಯಾದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ’ ಎಂದು ಗ್ರಾಮಸ್ಥ ಯಂಕು ಮರಾಠಿ ಹೇಳಿದರು.

20 ವರ್ಷಗಳ ಹಿಂದಿನ ಸಂಪರ್ಕ ಸೇತುವೆ ಕೊಚ್ಚಿ ಹೋಗಿರುವ ರಕ್ಷಣಾ ಕಂಬಗಳು 25 ಅಡಿ ಉದ್ದ ಸೇತುವೆ ದಾಟಲು ಆತಂಕ

ಈ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಿಸಲು ಕನಿಷ್ಠ ₹1.5 ಕೋಟಿ ಅನುದಾನ ಬೇಕು. ಸರ್ಕಾರ ಅನುದಾನ ನೀಡಿದರೆ ಗ್ರಾಮಸ್ಥರಿಗೆ ಅನುಕೂಲ ಆಗುತ್ತದೆ
ವಿಕಾಸ ನಾಯ್ಕ ಸಣ್ಣ ನೀರಾವರಿ ಇಲಾಖೆ ಎಇ

ಶಾಸಕರಿಂದ ಭರವಸೆ ತಾಲ್ಲೂಕಿನ ಅತಿ ಹಿಂದುಳಿದ ಪ್ರದೇಶವಾದ ಕೆಳಾಸೆ ಕುದ್ರಗೋಡ ಭಾಗದ ಜನರಿಗೆ ಅನುಕೂಲ ಆಗುವಂತೆ ಸ್ವದ್ಯೋಗ ತರಬೇತಿ ಕಾರ್ಯಕ್ರಮಕ್ಕೆ ಕೆಲ ದಿನಗಳ ಹಿಂದೆ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದ್ದರು. ಇದೇ ವೇಳೆ ಗ್ರಾಮಸ್ಥರ ಸಮಸ್ಯೆ ಆಲಿಸಿದ್ದ ಅವರು ಹಂತಹಂತವಾಗಿ ಇಲ್ಲಿ ಸೌಕರ್ಯ ಒದಗಿಸುವ ಭರವಸೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.