ಗೋಕರ್ಣ: ಶೃಂಗೇರಿ ಶಾರದಾ ಪೀಠದ ಯತಿ ವಿಧುಶೇಖರಭಾರತೀ ಸ್ವಾಮೀಜಿ ಅವರ ಎರಡು ದಿನಗಳ ಗೋಕರ್ಣ ಕ್ಷೇತ್ರದ ವಿಜಯ ಯಾತ್ರೆ ಭಾನುವಾರ ಆರಂಭ ಗೊಳ್ಳಲಿದೆ.

ಏ.30 ರಂದು ಸಂಜೆ 5.30ಕ್ಕೆ ಗೋಕರ್ಣ ಪ್ರವೇಶಿಸ ಲಿರುವ ಸ್ವಾಮೀಜಿ ಅವರನ್ನು ಭಕ್ತರು ಪೂರ್ಣಕುಂಭ ಮೆರವಣಿಗೆ ಮೂಲಕ ಸ್ವಾಗತಿಸಿಕೊಳ್ಳಲಿದ್ದಾರೆ. ಪುಷ್ಪಾಲಂಕೃತ ರಥದಲ್ಲಿ ಲಕ್ಷ್ಮೀವೆಂಕಟರಮಣ ದೇವಸ್ಥಾನದಿಂದ ಮುಖ್ಯ ಕಡಲತೀರದವರೆಗೆ ಮೆರವಣಿಗೆ ನಡೆಯಲಿದೆ. ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಶೃಂಗೇರಿ ಮಠದ ಆಡಳಿತಾಧಿಕಾರಿ ಡಾ.ವಿ.ಆರ್.ಗೌರಿಶಂಕರ ದಿಕ್ಸೂಚಿ ಭಾಷಣ ಮಾಡುವರು. ವಿಧುಶೇಖರಭಾರತಿ ಸ್ವಾಮೀಜಿ ಆಶೀರ್ವಚನ ನೀಡುವರು.

ಮೇ 1 ರಂದು ಬೆಳಿಗ್ಗೆ ಮಹಾಗಣಪತಿ, ಮಹಾಬಲೇಶ್ವರ ಮತ್ತು ಪಾರ್ವತಿ ದೇವಸ್ಥಾನದಲ್ಲಿ ಸ್ವಾಮೀಜಿ ಪೂಜೆ ಸಲ್ಲಿಸಲಿದ್ದು ಬಳಿಕ ಮೇಲಿನಕೇರಿಯಲ್ಲಿರುವ ಶಂಕರ ಮಠದಲ್ಲಿ ಶ್ರೀಗಳ ದರ್ಶನ, ಪಾದಪೂಜೆ, ಗೌರವಸಮರ್ಪಣೆ, ತೀರ್ಥಪ್ರಸಾದ, ಮಂತ್ರಾಕ್ಷತೆ ವಿತರಣೆ ನಡೆಯಲಿದೆ. ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನೂ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.