ಜೊಯಿಡಾ: ಕಾಳಿ ನದಿಯ ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳು ಪ್ರಸಕ್ತ ಸಾಲಿನ ಮಳೆ ಆರಂಭದಲ್ಲಿ ಮೈತುಂಬಿಕೊಂಡವು. ಆದರೆ, ಇದೇ ನದಿಯ ಪ್ರಮುಖ ಜಲಾಶಯ ಸೂಪಾದಲ್ಲಿ ಜುಲೈ 17ರವರೆಗೆ ಕಳೆದ ವರ್ಷಕ್ಕಿಂತ ನಾಲ್ಕು ಮೀಟರ್‌ಗಳಷ್ಟು ಕಡಿಮೆ ನೀರು ಸಂಗ್ರಹವಾಗಿದೆ.

564 ಮೀಟರ್ ಎತ್ತರವಿರುವ ಈ ಜಲಾಶಯದಲ್ಲಿ 1,057 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ 147.50 ಟಿ.ಎಂ.ಸಿ ಅಡಿ ನೀರು ಸಂಗ್ರಹವಾಗುತ್ತದೆ.ಕಳೆದ ವರ್ಷ ಈ ಹೊತ್ತಿಗೆ ಜಲಾಶಯವು ಶೇ 50ರಷ್ಟು ತುಂಬಿತ್ತು. ಆದರೆ, ಈಬಾರಿಸದ್ಯ 540.70 ಮೀಟರ್ ತುಂಬಿದ್ದು, ಶೇಕಡಾ 43.03ರಷ್ಟು ಭರ್ತಿಯಾಗಿದೆ. ಕೇವಲ 62 ಟಿ.ಎಂ.ಸಿ ಅಡಿ ನೀರಿನಸಂಗ್ರಹವಿದೆ.

ಸೂಪಾ ಜಲಾಶಯದ ಹಿನ್ನೀರಿನ ಪ್ರದೇಶವಾದ ಡಿಗ್ಗಿ, ರಾಮನಗರ, ಕುಂಡಲ್ ಪ್ರದೇಶದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಮಳೆ ದಾಖಲಾಗಿದೆ.ಈ ಭಾಗದ ಪ್ರಮುಖ ನದಿಗಳಾದ ಪಾಂಡ್ರಿ, ಕಾಳಿ, ನಾಶಿ ಹಾಗೂ ಕಾನೇರಿ ನದಿಗಳಲ್ಲಿ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಇಳಿದಿದೆ.

ಕಳೆದ ವಾರ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿತ್ತು.ಆದರೆ, ಭಾನುವಾರದಿಂದ ಮತ್ತೆ ಮಳೆ ಕೈಕೊಟ್ಟಿದೆ. ಹೀಗಾಗಿ, ಸೂಪಾ ಜಲಾಶಯಕ್ಕೆ ಒಳಹರಿವು ಬಹಳ ಕಡಿಮೆಯಾಗಿದೆ. ಬುಧವಾರ ಜಲಾಶಯಕ್ಕೆ 8,900ಕ್ಯುಸೆಕ್ ಮಾತ್ರ ದಾಖಲಾಗಿದೆ. ಈ ಬಾರಿ ಜಲಾಶಯದಿಂದ ಒಮ್ಮೆಯೂ ನೀರನ್ನುಹೊರಗೆ ಹರಿಸಿಲ್ಲ.

ಈಜಲಾಶಯದ ಹಿನ್ನೀರಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಕ್ಯಾಸಲ್‌ರಾಕ್‌ನಲ್ಲಿ ಇಲ್ಲಿಯ ತನಕ 2,230 ಮಿಲಿಮೀಟರ್ ಮಳೆ ದಾಖಲಾಗಿದೆ. ಜುಲೈ 11ರಂದು 203 ಮಿಲಿಮೀಟರ್ ಮಳೆಯಾಗಿದ್ದು ಈ ವರ್ಷದ ದಾಖಲೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.