ಕದ್ರಾ ಜಲಾಶಯದಲ್ಲಿ ಸೌರ ವಿದ್ಯುತ್ ಉತ್ಪಾದನೆ ಯೋಜನೆ ಆರಮಭಿಸುವ ಬಗ್ಗೆ ಕೆಲ ದಿನಗಳ ಹಿಂದೆ ಸಮೀಕ್ಷೆ ನಡೆದಿದ್ದು ಸಮೀಕ್ಷೆ ವರದಿ ಆಧರಿಸಿ ಸರ್ಕಾರದ ಹಂತದಲ್ಲಿ ನಿರ್ಣಯ ಆಗಲಿದೆ.
– ಶ್ರೀಧರ ಕೋರಿ, ಕಾಳಿ ವಿದ್ಯುತ್ ಯೋಜನೆಯ ಮುಖ್ಯ ಎಂಜಿನಿಯರ್
ರಾಜ್ಯದಲ್ಲೇ ಮೊದಲು
‘ಕದ್ರಾ ಜಲಾಶಯದಲ್ಲಿ ತೇಲುವ ಸೌರ ಫಲಕ ಅಳವಡಿಸಿ ವಿದ್ಯುತ್ ಉತ್ಪಾದನೆ ಪ್ರಕ್ರಿಯೆ ಆರಂಭಿಸುವ ಯೋಜನೆ ಜಾರಿಯಾದರೆ ಇದು ರಾಜ್ಯದಲ್ಲೇ ಜಲಾಶಯವೊಂದರಲ್ಲಿ ಸೌರವಿದ್ಯುತ್ ಉತ್ಪಾದಿಸುವ ಮೊದಲ ಯೋಜನೆ ಆಗುತ್ತದೆ’ ಎಂದು ಕಾಳಿ ವಿದ್ಯುತ್ ಯೋಜನೆಯ ಮುಖ್ಯ ಎಂಜಿನಿಯರ್ ಶ್ರೀಧರ ಕೋರಿ ಹೇಳಿದರು. ‘ಜಲಶಖ್ತಿಯ ಜೊತೆಗೆ ಸೌರ ಶಕ್ತಿ ಬಳಕೆ ಮಾಡಿ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಇದು ಅನುಕೂಲ ಆಗಲಿದೆ. ಯೋಜನೆ ಯಶಸ್ವಿಯಾದರೆ ಕೊಡಸಳ್ಳಿ ಸೂಪಾ ಸೇರಿದಂತೆ ಉಳಿದ ಜಲಾಶಯಗಳಲ್ಲೂ ಇದೇ ಮಾದರಿಯ ಯೋಜನೆ ಕೈಗೊಳ್ಳಬಹುದು. ಆದರೆ ಇವೆಲ್ಲ ಸರ್ಕಾರದ ಹಂತದಲ್ಲಿ ನಿರ್ಧಾರ ಆಗಲಿದೆ’ ಎಂದರು.