ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅವೈಜ್ಞಾನಿಕ ಪರಿಸರ ನಿರ್ವಹಣೆ ಪ್ರಾಕೃತಿಕ ವಿಕೋಪಕ್ಕೆ ಕಾರಣ: ಸುಭಾಶ್ಚಂದ್ರನ್

Published 26 ಜೂನ್ 2024, 14:01 IST
Last Updated 26 ಜೂನ್ 2024, 14:01 IST
ಅಕ್ಷರ ಗಾತ್ರ

ಕುಮಟಾ: ‘ಅತಿವೃಷ್ಟಿ, ಅನಾವೃಷ್ಟಿ, ಚಂಡಮಾರುತ, ಪ್ರವಾಹ, ಬಿರುಗಾಳಿ ಮುಂತಾದ ಪ್ರಾಕೃತಿಕ ವಿಕೋಪಕ್ಕೆ ನಾವು ಪರಿಸರಿವನ್ನು ವೈಜ್ಞಾನಿಕವಾಗಿ ನಿರ್ವಹಿಸಲು ವಿಫಲವಾಗಿರುವುದೇ ಪ್ರಮುಖ ಕಾರಣ’ ಎಂದು ಇಲ್ಲಿಯ ಭಾರತೀಯ ವಿಜ್ಞಾನ ಸಂಸ್ಥೆ ಶಾಖೆಯ ವಿಜ್ಞಾನಿ ಎಂ.ಡಿ. ಸುಭಾಶ್ಚಂದ್ರನ್ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಕಾಲೇಜಿನ ಆಂತರಿಕ ಗುಣಮಟ್ಟಾ ಭರವಸಾ ಕೋಶ, ವಿಜ್ಞಾನ ಸಂಘಟನೆ, ಕುಮಟಾದ ‘ಐಕ್ಯ’ ಸರ್ಕಾರೇತರ ಸಂಸ್ಥೆ, ಲೈಫ್ ಸ್ಟೈಲ್ ಎನ್ವಿರಾನ್‌ಮೆಂಟ್, ಇಂಪ್ರಿ ಸಂಸ್ಥೆ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ನಡೆದ ‘ಪರಿಸರ ಪರಿಚಯ ಮತ್ತು ನಿರ್ವಹಣಾ ಕಾರ್ಯಾಗಾರ’ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಕೈಗಾರಿಕಾ ಕ್ರಾಂತಿಗೆ ಚಾಲನೆ ಸಿಕ್ಕಿದ ನಂತರ ಭೂಮಿಗೆ ಜ್ವರ ಆವರಸಿತೊಡಗಿತು. ಈಗ ಆ ಜ್ವರ ಸಮುದ್ರಕ್ಕೂ ಆವರಿಸಿ, ಸಮುದ್ರ ಭೂಮಿಯನ್ನು ಆವರಿಸತೊಡಗಿದೆ. ಸಮುದ್ರ ದಂಡೆಯಲ್ಲಿ ನೈಸರ್ಗಿಕವಾಗಿದ್ದ ಕೇದಿಗೆ ವನ, ಮರಳು ದಿಬ್ಬ ರಕ್ಷಿಸುವ ಹುಲ್ಲು ತೆಗೆದು ಕಲ್ಲು ಬಂಡೆ ಹಾಕಿದ್ದರಿಂದ ಇನ್ನಷ್ಟು ಕೊರೆತ ಉಂಟಾಗುತ್ತಿದೆ’ ಎಂದರು

‘ಜೊಯಿಡಾ ಭಾಗದಲ್ಲಿ ಬೆಳೆಯುವ ನೈಸರ್ಗಿಕ ಗಡ್ಡೆ-ಗೆಣಸು ಭವಿಷ್ಯದ ಆಹಾರವಾಗಬಲ್ಲ ಸಾಧ್ಯತೆಗಳು ಕಾಣುತ್ತಿವೆ. ದೇಶದ 1.12 ಲಕ್ಷ ಭತ್ತ ತಳಿ ನಾಶವಾಗಿ ಈಗ 10ರಿಂದ 12 ಸಾವಿರ ತಳಿ ಮಾತ್ರ ಉಳಿದಿವೆ. ಭಾರತದ ನೈಸರ್ಗಿಕ ತಳಿಯ ದನಗಳನ್ನು ಮುಂದುವರಿದ ದೇಶಗಳು ಎಷ್ಟು ಹಣ ತೆತ್ತಾದರೂ ಖರೀದಿಸಲು ಮುಂದೆ ಬರುತ್ತಿವೆ’ ಎಂದರು.

ಕಾಲೇಜಿನ ವಿಜ್ಞಾನ ಸಂಘದ ಸಂಚಾಲಕ ಹಾಗೂ ಭೌತಶಾಸ್ತ್ರ ಉಪನ್ಯಾಸಕ ವಿ.ಮಂಜುನಾಥ ಸ್ವಾಗತಿಸಿದರು. ಐಕ್ಯ ಸರ್ಕಾರೇತರ ಸಂಸ್ಥೆ ಅಧ್ಯಕ್ಷ ಎಂ.ಜಿ. ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಚಾರ್ಯೆ ವಿಜಯಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಐ.ಕೆ. ನಾಯ್ಕ, ಗೀತಾ ನಾಯಕ, ವಿ.ಎಂ. ನಾಯ್ಕ, ಬಿ.ಎಂ. ಹೆಗಡೆ, ಪ್ರತಿಭಾ ಭಟ್ಟ, ಭಾರತೀಯ ವಿಜ್ಞಾನ ಸಂಸ್ಥೆಯ ಗಾಯತ್ರಿ ನಾಯ್ಕ, ವಿಷ್ಣು ಮುಕ್ರಿ, ಶ್ರೀಕಾಂತ ನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT