ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ | ಮಹಿಷಾಸುರ ಮರ್ಧಿನಿ ಜಾತ್ರೆ ನಾಳೆಯಿಂದ

Published 5 ಮಾರ್ಚ್ 2024, 14:27 IST
Last Updated 5 ಮಾರ್ಚ್ 2024, 14:27 IST
ಅಕ್ಷರ ಗಾತ್ರ

ಸಿದ್ದಾಪುರ: ತಾಲ್ಲೂಕಿನ ಮುಠ್ಠಳ್ಳಿ ಸಮೀಪದ ಹಳಿಯಾಳದ ಮಹಿಷಾಸುರ ಮರ್ಧಿನಿ ದೇವರ 58ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜಾತ್ರಾ ಮಹೋತ್ಸವ ಮಾ.6 ಹಾಗೂ 7ರಂದು ಜರುಗಲಿದೆ.

ವೇ.ಶ್ರೀಧರ ಎಂ.ಭಟ್ಟ ಮಾಣಿಕ್ನಮನೆ ಇವರ ಪೌರೋಹಿತ್ಯದಲ್ಲಿ ಮಾ.6ರಂದು ಬೆಳಗ್ಗೆ ಪಂಚಗವ್ಯ ಹವನ,ಗಣಹವನ, ಕುಂಕುಮಾರ್ಚನೆ, ಬಲಿಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ. ಮಾ.7ರಂದು ರಾಮತಾರಕ ಜಪ. ಗುರುಪಾದುಕಾ ಪೂಜೆ, ದೇವಿ ಪಾರಾಯಣ, ಅಷ್ಟಲಕ್ಷ್ಮೀಪೂಜಾ ಆರಾಧನೆ ಹಾಗೂ 108 ಸಾಮೂಹಿಕ ಸತ್ಯನಾರಾಯಣ ವೃತ, ಕುಂಕುಮಾರ್ಚನೆ,ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 9ರಿಂದ ಮಹಿಷಾಸುರ ಮರ್ಧಿನಿ ಗೆಳೆಯರ ಬಳಗ ಹಳಿಯಾಳ ಇವರ ನೇತೃತ್ವದಲ್ಲಿ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪಕರು ಹಾಗೂ ದೇವಿಯ ಅರ್ಚಕರಾದ ಮಂಜುನಾಥ ನಾಯ್ಕ ಪೂಜಾರ ಹಳಿಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT