ದಾಂಡೇಲಿ: ನಗರದ ಗಾಂಧಿ ನಗರದಲ್ಲಿ ಭಾನುವಾರ ತಡರಾತ್ರಿ, ಮೂವರ ಮಧ್ಯೆ ನಡೆಯುತ್ತಿದ್ದ ಹೊಡೆದಾಟ ಬಿಡಿಸಲು ಹೋದ ಯುವಕನನ್ನೇ ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.

ಸ್ಥಳೀಯ ಯುವಕ ಮನೋಜ್ ಪ್ರಕಾಶ ಪಾಟೀಲ (22) ಕೊಲೆಯಾದವರು. ಸ್ಥಳೀಯರಾದ ಫಾರೂಖ್, ಕಾರ್ತಿಕ್ ಹಾಗೂ ಇನ್ನೊಬ್ಬರು ಹೊಡೆದಾಡಿಕೊಳ್ಳುತ್ತಿದ್ದರು. ಆಗ, ಮನೋಜ್ ತಮ್ಮ ಅಣ್ಣ ಸಂದೀಪ ಪ್ರಕಾಶ ಪಾಟೀಲಗೆ ಹೊಡೆಯುವುದನ್ನು ತಪ್ಪಿಸಲು ಹೋದರು. ಅಷ್ಟರಲ್ಲಿ ಫಾರೂಖ್ ಚಾಕುವಿನಿಂದ ಎದೆಯ ಭಾಗಕ್ಕೆ ಇರಿದರು. ಮೃತ ಯುವಕ ಗೋವಾದಲ್ಲಿ ಕೆಲಸ ಮಾಡುತ್ತಿದ್ದು, ಊರಿಗೆ ಬಂದಿದ್ದಾಗ ಈ ಕೃತ್ಯ ನಡೆದಿದೆ.

ಘಟನೆ ಸ್ಥಳಕ್ಕೆ ದಾಂಡೇಲಿ ನಗರದ ಡಿ.ವೈ.ಎಸ್ಪಿ ಕೆ.ಎಲ್.ಗಣೇಶ, ಸಿ.ಪಿ.ಐ ಪ್ರಭು ಗಂಗನಹಳ್ಳಿ, ನಗರ ಪೊಲೀಸ್ ಠಾಣೆ ಪಿ.ಎಸ್.ಐ ಯಲ್ಲಪ್ಪ.ಎಸ್, ಅಪರಾಧ ವಿಭಾಗದ ಪಿ.ಎಸ್.ಐ ಮಹಾದೇವ ನಾಯ್ಕವಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.