ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಸೂಪರ್ ಮಾರ್ಕೆಟ್ ಉತ್ತಮ ಸಂಸ್ಥೆ

ಮಲ್ಟಿಲೆವೆಲ್ ಮಾರ್ಕೆಟಿಂಗ್ ಮಸೂದೆಗೆ ಅಂತಿಮ ಸ್ಪರ್ಶ
Last Updated 22 ಜುಲೈ 2013, 9:50 IST
ಅಕ್ಷರ ಗಾತ್ರ

ಕಾಸರಗೋಡು: ಬಹು ಹಂತದ (ಮಲ್ಟಿಲೆವೆಲ್) ಮಾರ್ಕೆಟಿಂಗ್ ವ್ಯವಸ್ಥೆಯನ್ನು ಉದ್ಯಮವನ್ನಾಗಿ ಅಂಗೀಕರಿಸಿದ ಮಸೂದೆ ಕಾನೂನು ಇಲಾಖೆಯ ತಿದ್ದುಪಡಿಯೊಂದಿಗೆ ಅಂತಿಮ ಹಂತದಲ್ಲಿದ್ದು, ಅತ್ಯುತ್ತಮ ಸಂಸ್ಥೆಗಳ ಪಟ್ಟಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡ ಗ್ರಾಮೀಣ ಸೂಪರ್ ಮಾರ್ಕೆಟ್ ಕೂಡಾ ಸ್ಥಾನ ಪಡೆದಿದೆ.

ಸರ್ಕಾರದ ಪ್ರಧಾನ ಕಾರ್ಯದರ್ಶಿ, ಮಲ್ಟಿ ಲೆವೆಲ್ ಮಾರ್ಕೆಟಿಂಗ್ ನಿಯಂತ್ರಣ ಪ್ರಾಧಿಕಾರವು ಇದಕ್ಕೆ ಸಂಬಂಧಿಸಿದ ಕರಡು ಮಸೂದೆಗೆ ಹಸಿರು ನಿಶಾನೆ ತೋರಿದ ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಕೆ.ಎಸ್.ಶ್ರಿನಿವಾಸ್, ಕಾನೂನು ಇಲಾಖೆಯ ಕಾರ್ಯದರ್ಶಿ, ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರನ್ನು ಒಳಗೊಂಡ ಸಮಿತಿ ಸಭೆ ಸೇರಿ ಮಸೂದೆಗೆ ಅಂತಿಮ ರೂಪ ನೀಡಿದೆ.

ಇದಕ್ಕೆ ಸಂಬಂಧಿಸಿ ಕೇಂದ್ರದ ಕಾಯ್ದೆಯಲ್ಲಿ ಪರಿಷ್ಕಾರ ತರಲು ಇದೇ 22ರಂದು ನವದೆಹಲಿಯಲ್ಲಿ ಸಭೆ ಕರೆಯಲಾಗಿದೆ. ಬರುವ ತಿಂಗಳು ಕೇಂದ್ರ ಚಿಟ್ಸ್ ಆ್ಯಂಡ್ ಮನಿ ಪ್ರಾಕ್ಟೀಸ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲು ಕಂಪೆನಿ ವ್ಯವಹಾರಗಳ ಇಲಾಖೆ ತೀರ್ಮಾನಿಸಿದೆ.

ಈ ಕಾಯ್ದೆ ಮನಿಚೈನ್ ವ್ಯವಹಾರಗಳಿಗೆ ಕಡಿವಾಣ ಹಾಕಲಿದೆ. ಇದು ಮಲ್ಟಿಲೆವೆಲ್ ಮಾರ್ಕೆಟಿಂಗ್ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಅಭಿವೃದ್ಧಿ ಪಡಿಸಲು ಮತ್ತು ಹಣಕಾಸು ವ್ಯವಹಾರಗಳ ಮೇಲೆ ನಿಯಂತ್ರಣ ಹೇರಲು ಚಿಟ್ಸ್ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.

ಇದೇ 29ರ ವರೆಗೆ ವಿಧಾನಸಭಾ ಕಲಾಪಗಳನ್ನು ನಡೆಸಲು ತೀರ್ಮಾನಿಸಲಾಗಿತ್ತು. ಸೋಲಾರ್ ವಿವಾದದ ಹಿನ್ನೆಲೆಯಲ್ಲಿ ಕಲಾಪಕ್ಕೆ ತೆರೆ ಎಳೆದ ಕಾರಣ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ಕೈಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ. ಅದಕ್ಕೂ ಮೊದಲು ಕೇರಳದ ಮಲ್ಟಿಲೆವೆಲ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ ನಿರ್ದೇಶನ ನೀಡಿದೆ.

14 ಲಕ್ಷ ವಿತರಣೆಗಾರರು ಮಲ್ಟಿಲೆವೆಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಸರ್ಕಾರಿ ಲೆಕ್ಕಾಚಾರಗಳೂ ಇದನ್ನು ದೃಢಪಡಿಸಿವೆ. ಇದರಲ್ಲಿ ಉತ್ತಮ ಮತ್ತು ಅನರ್ಹ ಸಂಸ್ಥೆಗಳನ್ನು ಬೇರ್ಪಡಿಸಲು ನಿರ್ದೇಶನ ನೀಡಲಾಗಿದೆ. 30 ಕಂಪೆನಿಗಳು ಕೇರಳ ರಾಜ್ಯದಲ್ಲಿ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತವೆ. ಇದರಲ್ಲಿ ಕಾಸರಗೋಡು ಮೂಲದ ಗ್ರಾಮೀಣ ಸೂಪರ್ ಮಾರ್ಕೆಟ್ ಲಿಮಿಟೆಡ್ ಸಹಿತ ಆಮ್‌ವೇ, ಡಿಎಕ್ಸ್‌ಎನ್, ಧನ್ವಂತರಿ, ಟಿ ಆ್ಯಂಡ್ ಶಿ, ಮೊನಾವಿ ಉತ್ತಮ ನೆಟ್‌ವರ್ಕ್ ಕಂಪೆನಿಗಳೆಂದು ಗುರುತಿಸಲಾಗಿದೆ.

ಈ ಕಂಪೆನಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂತೆಗೆಯಲಾಗುವುದು. ಉಳಿದ ಕಂಪೆನಿಗಳ ಏಜೆಂಟರ ವಿರುದ್ಧದ ಪ್ರಕರಣಗಳು ಮುಂದುವರಿಯಲಿದೆ. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಶ್ರಿನಿವಾಸ್ ಸಿದ್ಧಪಡಿಸಿದ 14 ಪುಟಗಳ ಕರಡು ಮಸೂದೆ ರಾಜ್ಯದ ಮಲ್ಟಿಲೆವೆಲ್ ಮಾರ್ಕೆಟಿಂಗ್ ವ್ಯವಸ್ಥೆಯನ್ನು ಯಶಸ್ವಿ ಉದ್ಯಮವೆಂಬ ನೆಲೆಯಲ್ಲಿ ಕಾನೂನಿನ ರಕ್ಷಣೆ ನೀಡಲು ಮುಂದಾಗಿದೆ.

ಕೇಂದ್ರದ ಕರಡು ಮಸೂದೆಯ ಉಗಮಸ್ಥಳ ಕೇರಳ ರಾಜ್ಯ. ಕಲ್ಲಿಕೋಟೆ ನಿವಾಸಿಯಾಗಿರುವ ವಕೀಲರೊಬ್ಬರು ಮಲ್ಟಿಲೆವೆಲ್ ಮಾರ್ಕೆಟಿಂಗ್ ಸಂಘಟನೆಯ ಮೂಲಕ ನೀಡಿದ ನಿರ್ದೇಶನಗಳು ಕೇಂದ್ರ ಸರ್ಕಾರದ ಮಸೂದೆಯಾಗಿ ಜಾರಿಗೆ ಬರಲಿದೆ. ಮಲ್ಟಿಲೆವೆಲ್ ಮಾರ್ಕೆಟಿಂಗ್ ಅಥಾರಿಟಿ ಎಂಬ ಸರ್ಕಾರಿ ಸಂಸ್ಥೆಯು ಮಲ್ಟಿಲೆವೆಲ್ ಮಾರ್ಕೆಟಿಂಗ್ ಉದ್ಯಮವನ್ನು ನಿಯಂತ್ರಿಸಲಿದೆ. ಇದರಿಂದ ಜನರ ಸಂಶಯ, ಆತಂಕ ದೂರವಾಗಿ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ವ್ಯವಸ್ಥೆ ಬಳಕೆದಾರರ ಮನಗೆಲ್ಲಲು ಹವಣಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT