ಶಿರಸಿ: ‘ರಾಮಾಯಣ, ಮಹಾಭಾರತ ಗಳು ಭಾರತ ದೇಶದ ಚಿರಂತನ ಸಾಹಿತ್ಯಗಳಾಗಿವೆ. ಭಾರತೀಯ ಜೀವನ ಪದ್ಧತಿಯ ಎಲ್ಲ ಮೌಲ್ಯಗಳಿಗೆ ಇವು ಪ್ರತೀಕವಾಗಿವೆ’ ಎಂದು ಬರಹಗಾರ ಡಾ. ಪ್ರಧಾನ ಗುರುದತ್ತ ಹೇಳಿದರು.

ತಾಲ್ಲೂಕಿನ ಯಡಳ್ಳಿಯಲ್ಲಿ ಭಾನುವಾರ ಮುಕ್ತಾಯಗೊಂಡ ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಎರಡು ದಿನಗಳ ಕರ್ನಾಟಕ ಪ್ರಾಂತ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ರಾಮಾಯಣ ಹಾಗೂ ಮಹಾಭಾರತಗಳು ಜನರನ್ನು ಪರಿವರ್ತಿಸುವ ಹಾಗೂ ಜನ ಜೀವನ, ಸಂಸ್ಕೃತಿಯನ್ನು ಪ್ರಭಾವಿಸುವ ಕಾವ್ಯಗಳಾಗಿವೆ. ಅನೇಕ ಭಾಷೆಗಳಲ್ಲಿ ಕಾವ್ಯ ಸೃಷ್ಟಿಗೆ ಇವು ಮೂಲವಾಗಿವೆ. ಅದೆಷ್ಟೋ ಕೌಟುಂಬಿಕ ನೋವುಗಳಲ್ಲಿ ಇಂಥ ಕಾವ್ಯಗಳು ಮರಳಿ ಜೀವನೋತ್ಸಾಹ ನೀಡುತ್ತವೆ. ಇವು ಕೌಟುಂಬಿಕ ವ್ಯವಸ್ಥೆಗೆ ಬಲ ನೀಡುವ ಕಾವ್ಯಗಳಾಗಿವೆ ಎಂದರು.

ಧರ್ಮಸೂಕ್ಷ್ಮತೆಯ ಸಂದರ್ಭದಲ್ಲಿ ತ್ಯಾಗದ ಮೂಲಕ ಸಮಸ್ಯೆ ಪರಿಹಾರ ನೀಡುವ ಗುಣವನ್ನು ಭಾರತೀಯ ಸಾಹಿತ್ಯಗಳು ಮಾಡಿವೆ. ಇಂತಹ ಸಾಹಿತ್ಯಗಳ ಅರಿವಿನಿಂದ ಕೌಟುಂಬಿಕ ವ್ಯವಸ್ಥೆಯನ್ನು ಬಲಪಡಿಸಬೇಕಾಗಿದೆ.

ಕುಟುಂಬ ವ್ಯವಸ್ಥೆ ಮೌಲ್ಯಗಳ ಆಗರವಾಗಿದೆ. ಸಮಾಜದಲ್ಲಿ ಆದರ್ಶ ಉಳಿದುಕೊಳ್ಳಲು ಕುಟುಂಬವೇ ಕಾರಣವಾಗಿದೆ. ಕೇವಲ ಮನೆಯಷ್ಟೇ ಕುಟುಂಬ ಎಂದು ಭಾವಿಸದೇ ‘ವಸುದೈವ ಕುಟುಂಬಕಮ್’ ಭಾವನೆ ಮೂಡಿಸಿಕೊಳ್ಳಬೇಕು ಎಂದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ ಮಾತನಾಡಿ ‘ಮಾನವರೆಲ್ಲರೂ ಒಂದೇ ಎನ್ನುವ ಮೂಲಕ ಎಲ್ಲ ಬಗೆಯ ಅದೃಶ್ಯಗಳ ಅಂತರವನ್ನು ಈ ಸಮ್ಮೇಳನ ಕಿತ್ತೊಗೆದಿದೆ. ಪ್ರೀತಿ, ಸ್ನೇಹ ವಿಶ್ವಾಸದ ರೂಪದಲ್ಲಿ ಕುಟುಂಬ ವ್ಯವಸ್ಥೆ ದೃಢೀಕರಿಸುವ ಕಾರ್ಯ ಹಾಗೂ ಮೌಲ್ಯಗಳ ಪುನರುತ್ಥಾನದ ಪ್ರಯತ್ನ ಇಲ್ಲಿ ನಡೆದಿದೆ’ ಎಂದರು.

‘ಇಂಗ್ಲಿಷ್ ಭಾಷೆಯ ಕಡೆಗೆ ಯುವ ಜನರು ಪರವಶರಾಗುತ್ತಿದ್ದರೂ ಕನ್ನಡಕ್ಕೆ ಅದರದೇ ಆದ ಕಿಮ್ಮತ್ತಿದೆ. ಗ್ರೀಕ್ ನಾಟಕದಲ್ಲಿ ಕನ್ನಡದ ಪದಗಳಿವೆ ಎಂಬುದನ್ನು ನೋಡಿದರೆ ನಮ್ಮ ಕನ್ನಡದ ನೆಲದಲ್ಲಿ ಬೇರುಗಳು ಆಳವಾಗಿರುವುದು ಅರಿವಿಗೆ ಬರುತ್ತದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ ‘ಸಾಹಿತ್ಯ ಮತ್ತು ಧರ್ಮವನ್ನು ತಳಕು ಹಾಕಲು ಈ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಕೌಟುಂಬಿಕ ಮೌಲ್ಯ ಬಿತ್ತಲು ಅಲ್ಲ ಎಂದು ಕೆಲವು ಸ್ನೇಹಿತರು ಕರೆ ಮಾಡಿ ನನಗೆ ಹೇಳಿದ್ದರು. ಕುಟುಂಬ ಮೌಲ್ಯ ಇಂದಿನ ಅಗತ್ಯವಾಗಿದೆ. ಸಾಹಿತ್ಯ ಮತ್ತು ಧರ್ಮದ ಬಗ್ಗೆ ಚರ್ಚೆಗಿಂತ ಮುಖ್ಯವಾಗಿ ಸಾಹಿತ್ಯ ಧರ್ಮದ ಚರ್ಚೆ ಸಮಾಜದಲ್ಲಿ ನಡೆಯಬೇಕು’ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜದೊಡನೆ ಒಂದಾಗಿ ಎಲೆಮರೆಯ ಕಾಯಿಯಂತಿರುವ ಅತ್ತಾಜೆ ಕೇಶವ ಭಟ್ಟ ಬಂಟ್ವಾಳ, ಬಸವಣ್ಣೆಪ್ಪ ಕಡಸೂಸು ಸೊರಬ, ಶಾ.ಮಂ.ಕೃಷ್ಣರಾಯ, ಲಕ್ಷ್ಮಿ ಭಾಗವತ ತ್ಯಾರಗಲ್, ವಿಠ್ಠಲ ಶೆಣೈ ಮುಳ್ಳೇರಿಯಾ, ಸುಬ್ರಾಯ ನಾಯ್ಕ ರಿಪ್ಪನಪೇಟೆ, ಶ್ರೀನಿವಾಸ ಶೆಟ್ಟಿ ಧರ್ಮಸ್ಥಳ, ಸುಲೋಚನಾ ಆನಂದರಾವ್ ಸಾಗರ, ಮುರಾರಿ ಭಟ್ಟ, ಗುರುಪಾದಪ್ಪ ಮುಧೋಳ ಬಾಗಲಕೋಟೆ, ಸುಬ್ಬಮ್ಮ ಸುಬ್ರಾಯ ಹೆಗಡೆ, ಶಾರದಾ ಸೀತಾರಾಮ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸಮ್ಮೇಳನದ ಅಧ್ಯಕ್ಷರನ್ನು ಸಂಘಟಕರು ಸನ್ಮಾನಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಭಾಗವತ, ರಾಜ್ಯ ಸಂಚಾಲಕ ರಘುನಂದನ ಭಟ್ಟ ಇದ್ದರು. ವೆಂಕಟೇಶ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಗೌರವಿಸಿರುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಇದು ಮುಂದಿನ ಪೀಳಿಗೆಗೆ ಮಾದರಿಯಾಗಿದೆ
-ಮುರಾರಿ ಭಟ್ಟ, ಸನ್ಮಾನಿತರು

ಕುಟುಂಬ ಸಮೇತ ತಾಲ್ಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ ಎಂದು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ. ಅಂಥ ಪ್ರೇರಣೆಯನ್ನು ಈ ಸಮ್ಮೇಳನ ನೀಡಿದೆ
-ಅರವಿಂದ ಕರ್ಕಿಕೋಡಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ

ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳು:
* ಮಕ್ಕಳಿಗೆ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮಾತೃಭಾಷೆಯಲ್ಲಿಯೇ ಸಿಗುವಂತಾಗಲು ಸರ್ಕಾರ ಪೂರಕ ಶಾಸನ, ಕಾನೂನು ರಚಿಸಬೇಕು. ಮಾತೃಭಾಷೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚು ಸಿಗುವಂತೆ ಈ ಶಾಸನ ರೂಪಿಸಬೇಕು
* ಆಧುನಿಕ ಅಪಸವ್ಯಗಳಿಗೆ ತೆರದುಕೊಂಡಂತೆ ಸಮಾಜದಲ್ಲಿ ಕೌಟುಂಬಿಕ ಮೌಲ್ಯಗಳು ಕ್ಷೀಣಗೊಳ್ಳುತ್ತಿವೆ. ಮೊಬೈಲ್, ಲ್ಯಾಪ್ಟಾಪ್ ಮತ್ತಿತರ ಆಧುನಿಕ ತಂತ್ರಜ್ಞಾನದ ಕೈಹಿಡಿತದಲ್ಲಿರುವ ಯುವ ಪೀಳಿಗೆ ಮೌಲ್ಯಯುತ ಬದುಕಿನಿಂದ ದೂರ ಸರಿಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸಮಾಜ ಹಾಗೂ ರಾಷ್ಟ್ರದ ಮೂಲಭೂತ ಘಟಕವಾಗಿರುವ ಕುಟುಂಬ ವ್ಯವಸ್ಥಿತವಾಗಿರಲು ಹಿರಿಯರು ಹಾಗೂ ತಾಯಂದಿರು ತಮ್ಮ ಮನೆಗಳಲ್ಲಿ ಮುಂದಿನ ಪೀಳಿಗೆಯನ್ನು ಹಿಂದೂ ಕುಟುಂಬ ಮೌಲ್ಯಗಳ ಆಧಾರದಲ್ಲಿ ನಿರ್ಮಾಣ ಮಾಡಬೇಕು.
* ಕೌಟುಂಬಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರ ಹಾಗೂ ಮಾಧ್ಯಮಗಳ ಪಾತ್ರವೂ ಇದೆ. ಕುಟುಂಬ ಒಡೆಯದಂತೆ, ಮೌಲ್ಯಗಳು ಕ್ಷೀಣಿಸದಂತೆ ಹಾಗೂ ಕಾನೂನುಗಳ ಅಪಬಳಕೆ ಆಗದಂತೆ ಮೌಲ್ಯಪೋಷಕವಾಗುವ ಶಾಸನ ರೂಪಿಸಬೇಕು. ಮಾಧ್ಯಮಗಳು ಮೌಲ್ಯಯುಕ್ತವಾದ, ವ್ಯಕ್ತಿ ನಿರ್ಮಾಣದ ವರದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಬೇಕು
* ಮಾತೃಭಾಷೆ ಯಾವುದೇ ವ್ಯಕ್ತಿಯ ಬೆಳವಣಿಗೆಯಲ್ಲಿ ಉಸಿರಾಗಿದೆ. ಉದ್ಯೋಗ, ವ್ಯವಹಾರಗಳಿಗೆ ಉಳಿದ ಭಾಷೆ ಬೇಕಾದರೆ ಅವುಗಳನ್ನು ಮಾತೃ ಭಾಷೆಗೆ ಸಮಾನವಾಗಿ ಹಾಗೂ ಮಾತೃಭಾಷೆ ಬಲಿಕೊಟ್ಟು ಅಪ್ಪಿಕೊಳ್ಳುವ ಕಾರ್ಯ ಆಗಬಾರದು. ವ್ಯಕ್ತಿಗತವಾಗಿ ಪ್ರತಿಯೊಬ್ಬರೂ ಮನೆಗಳಲ್ಲಿ ಮಾತೃಭಾಷೆಯಲ್ಲಿ ಮಾತನಾಡಬೇಕು
* ಸಮ್ಮೇಳನ ಪ್ರತಿ 3 ವರ್ಷಗಳಿಗೊಮ್ಮೆ ನಡೆಯಲಿದ್ದು, ಮುಂದಿನ ಸಮ್ಮೇಳನ ಮೈಸೂರಿನಲ್ಲಿ ನಡೆಸಲು ನಿರ್ಣಯಿಸಲಾಯಿತು. ಪರಿಷತ್ನ ಕರ್ನಾಟಕ ಪ್ರಾಂತ ಸಂಚಾಲಕ ನಾರಾಯಣ ಶೇವಿರೆ ನಿರ್ಣಯ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.