ಶಿರಸಿ: ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಅಡಿಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಆರು ತಾಲ್ಲೂಕುಗಳು ಒಳಗೊಂಡಂತೆ ಖಾಸಗಿ ಶಾಲೆ ಗಳಲ್ಲಿ ಶೇ 25ರಷ್ಟು ಬಡ ಹಾಗೂ ದುರ್ಬಲ ವರ್ಗದ ಮಕ್ಕಳಿಗೆ ಲಭ್ಯವಿದ್ದ 358 ಸೀಟುಗಳಲ್ಲಿ 330 ಅರ್ಜಿಗಳನ್ನು ಅಂತಿಮಗೊಳಿಸಲಾಗಿದೆ.

ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಎಂ.ಎಸ್.ಪ್ರಸನ್ನಕುಮಾರ್ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಆರ್ಟಿಇ ಮಾಹಿತಿ ನೀಡಿದರು. ‘ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೊಯಿಡಾ ತಾಲ್ಲೂಕುಗಳಲ್ಲಿ ಒಟ್ಟು 35 ಶಾಲೆಗಳಲ್ಲಿ ಎಲ್ಕೆಜಿಗೆ 84, 1ನೇ ತರಗತಿಗೆ 274 ಸೀಟುಗಳನ್ನು ನಿಗದಿಪಡಿಸಲಾಗಿತ್ತು. ಎಲ್ಕೆಜಿಗೆ 137 ಹಾಗೂ 1ನೇ ತರಗತಿಗೆ 340 ಅರ್ಜಿಗಳು ಬಂದಿದ್ದವು’ ಎಂದರು.

‘ಶೈಕ್ಷಣಿಕ ಜಿಲ್ಲೆಯ ಖಾಸಗಿ ಶಾಲೆಗಳಿಗೆ 2012–13ನೇ ಸಾಲಿನಲ್ಲಿ ಸರ್ಕಾರದಿಂದ ಭರಣ ಮಾಡಬೇಕಾಗಿದ್ದ ₨ 9.91 ಲಕ್ಷ ಶುಲ್ಕ ಪಾವತಿಸಲಾಗಿದೆ. 2013–14ನೇ ಸಾಲಿನ ಮೊದಲ ಕಂತು ₨ 4.95 ಲಕ್ಷ ಹಾಗೂ ಅಂತಿಮ ಕಂತು ₨ 18.13 ಲಕ್ಷ ಮೊತ್ತ ಇನ್ನೂ ಬರಬೇಕಾಗಿದೆ’ ಎಂದರು.

‘ಸರ್ವ ಶಿಕ್ಷಾ ಅಭಿಯಾನದ ಮಾಧ್ಯಮ ಮತ್ತು ದಾಖಲೀಕರಣ ಚಟುವಟಿಕೆ ಅಡಿಯಲ್ಲಿ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಹಿಂದಿನ ವರ್ಷ ಜಿಲ್ಲೆಯಲ್ಲಿ ಪ್ರಾರಂಭಿ ಸಿದ್ದ ಕಲಿಕೋತ್ಸವ, ಕಲಿಕಾ ಕಾರ್ನರ್ ಕಾರ್ಯ ಕ್ರಮಗಳು ಮಾದರಿಯಾಗಿದ್ದು, ಶಿಕ್ಷಣ ಇಲಾಖೆ ರಾಜ್ಯಾದ್ಯಂತ ವಿಸ್ತರಿಸಿದೆ. ಇದಕ್ಕಾಗಿ ಪ್ರತಿ ಶಾಲೆಗೆ ಶಿಕ್ಷಣ ಇಲಾಖೆಯಿಂದ ₨ 50ಸಾವಿರ ಅನುದಾನ ನಿಗದಿಪಡಿಸಲಾಗಿದೆ. ಕಲಿಕೋತ್ಸವ ಉತ್ತಮ ಫಲಿತಾಂಶ ನೀಡಿದ್ದು ಮಕ್ಕಳಲ್ಲಿ ಶೈಕ್ಷಣಿಕ ಗುಣಮಟ್ಟ ವೃದ್ಧಿಸಿದೆ’ ಎಂದರು.

‘ಇದೇ ಕಾರ್ಯಕ್ರಮದ ಅಡಿಯಲ್ಲಿ ಈ ವರ್ಷ ಆಸರೆ, ಸ್ಪೋಕನ್ ಇಂಗ್ಲಿಷ್ ಹಾಗೂ ಪ್ರಯೋಗ ಕಿರಣ ಪುಸ್ತಕಗಳನ್ನು ಸಿದ್ಧಪಡಿಸಿ ಶಾಲೆಗಳಿಗೆ ವಿತರಿಸಲಾಗುತ್ತಿದ್ದು, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ದೊರೆತಿದೆ. ಪ್ರಯೋಗ ಕಿರಣ ಪುಸ್ತಕದಲ್ಲಿ ಪವಾಡ ಬಯಲು ತಂತ್ರಗಳನ್ನು ಸಹ ನಿರೂಪಿಸಲಾಗಿದ್ದು, ಮಕ್ಕಳಲ್ಲಿ ಮೂಢನಂಬಿಕೆ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ. ಶಿರಸಿ ತಾಲ್ಲೂಕಿನ ತಿಗಣಿ ಜಾತ್ರೆಯಲ್ಲಿ ಮಕ್ಕಳು ಪವಾಡ ತಂತ್ರ ಬಯಲು ಕಾರ್ಯಕ್ರಮ ಪ್ರದರ್ಶಿಸಿದರು’ ಎಂದು ಅವರು ಹೇಳಿದರು.

‘ಶತಮಾನ ಕಂಡಿರುವ 64 ಶತಾಯುಷಿ ಶಾಲೆಗಳನ್ನು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಗುರುತಿಸಿ, ಶತಾಯುಷಿಗೆ ನಮನ ಹಮ್ಮಿಕೊಳ್ಳ ಲಾಗಿದೆ. ಹಿಂದಿನ ವರ್ಷವೇ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. 193 ವರ್ಷ ಕಂಡಿರುವ ಹಳಿಯಾಳ ತಾಲ್ಲೂಕಿನ ಬಿ.ಕೆ.ಹಳ್ಳಿ ಶಾಲೆ ಶೈಕ್ಷಣಿಕ ಜಿಲ್ಲೆಯ ಹಿರಿಯಜ್ಜನಾಗಿದೆ. ಎಲ್ಲ ಶತಾಯುಷಿಗಳ ಮಾಹಿತಿ ದಾಖಲೀಕರಣ ಮಾಡಲಾಗಿದೆ’ ಎಂದು ಹೇಳಿದರು.

‘ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವ ಕಾರ್ಯಕ್ರಮದ ಅಡಿಯಲ್ಲಿ ಶೈಕ್ಷಣಿಕ ಜಿಲ್ಲೆಯಲ್ಲಿ 6ರಿಂದ 14 ವರ್ಷದ 1038 ಮಕ್ಕಳನ್ನು ಗುರುತಿಸಿದ್ದು, ವಿಶೇಷ ತರಗತಿ ನಡೆಸಿ ಅವರನ್ನು ಶೈಕ್ಷಣಿಕವಾಗಿ ಅಣಿಗೊಳಿಸಲಾಗುತ್ತಿದೆ’ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಎನ್.ಆರ್.ಹೆಗಡೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.