ಹರಪನಹಳ್ಳಿ : ತಾಲ್ಲೂಕಿನ ಕಣಿವಿಹಳ್ಳಿ ಗ್ರಾಮದಲ್ಲಿ ಗುರುವಾರ ಕಲುಷಿತ ನೀರು ಕುಡಿದು 14 ಜನರಿಗೆ ವಾಂತಿ ಭೇದಿಯಾಗಿದ್ದು, ತೀವ್ರ ಅಸ್ವಸ್ಥರಾದ ಒಬ್ಬರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ನಂದಿಬೇವೂರು ಗ್ರಾಮ ಪಂಚಾಯಿತಿಗೆ ಒಳಪಡುವ ಕಣಿವಿಹಳ್ಳಿಯಲ್ಲಿ ಅಸ್ವಸ್ಥಗೊಂಡ ಜನರೆಲ್ಲ ಒಂದೇ ಓಣಿಯಲ್ಲಿದ್ದಾರೆ. ಆ ಪ್ರದೇಶಕ್ಕೆ ಪೂರೈಸುವ ನೀರಿನ ಪೈಪ್ ಒಡೆದು, ಚರಂಡಿ ನೀರು ಸೇರಿದ್ದರಿಂದ ವಾಂತಿ ಭೇದಿಯಾಗಿದೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ಕಲುಷಿತ ನೀರು ಕುಡಿದು ಅಸ್ವಸ್ಥಗೊಂಡವರಿಗೆ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.