ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಜಿಲ್ಲೆಯಾದ್ಯಂತ ರೋಹಿಣಿ ಮಳೆ ಆರ್ಭಟ

Last Updated 3 ಜೂನ್ 2021, 17:12 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಅವಳಿ ಜಿಲ್ಲೆಗಳಾದ ವಿಜಯನಗರ, ಬಳ್ಳಾರಿಯ ಬಹುತೇಕ ಭಾಗಗಳಲ್ಲಿ ರೋಹಿಣಿ ಮಳೆ ತನ್ನ ಆರ್ಭಟ ತೋರಿದೆ.

ಹೊಸಪೇಟೆ, ಬಳ್ಳಾರಿ, ಕುರುಗೋಡು, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಸಂಡೂರು ಸೇರಿದಂತೆ ಇತರೆ ಭಾಗಗಳಲ್ಲಿ ಬುಧವಾರ ರಾತ್ರಿ ಉತ್ತಮ ಮಳೆಯಾಗಿದೆ.ರಾತ್ರಿ ಹತ್ತು ಗಂಟೆ ಸುಮಾರಿಗೆ ಆರಂಭಗೊಂಡ ಧಾರಾಕಾರ ಮಳೆ ತಡರಾತ್ರಿ ವರೆಗೂ ಸುರಿದಿದೆ. ಉತ್ತಮ ಮಳೆಗೆ ನಗರ ಹೊರವಲಯದ ರಾಯರ ಕೆರೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದೆ. ಕಬ್ಬು, ಮೆಕ್ಕೆಜೋಳ ಗದ್ದೆಗೆ ಅಪಾರ ನೀರು ನುಗ್ಗಿದೆ. ಗುರುವಾರ ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಸಂಜೆ ದಟ್ಟ ಕಾರ್ಮೋಡ ಕವಿದು, ಗುಡುಗು ಮಿಂಚಿನೊಂದಿಗೆ ಪುನಃ ವರ್ಷಧಾರೆಯಾಗಿದೆ.

ಹೊಸಪೇಟೆ ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಗುರುವಾರ ಸಂಜೆ ಗಂಟೆಗೂ ಹೆಚ್ಚು ಕಾಲ ಬಿರುಸಿನ ಮಳೆಯಾಯಿತು. ತಾಲ್ಲೂಕಿನ ಹಂಪಿ, ಕಮಲಾಪುರ, ವ್ಯಾಸನಕೆರೆ, ಹೊಸೂರು, ನಾಗೇನಹಳ್ಳಿ ಸೇರಿದಂತೆ ಇತರೆ ಕಡೆಗಳಲ್ಲೂ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.

ಅವಧಿಗೂ ಮುನ್ನವೇ ಜಿಲ್ಲೆಗೆ ಮುಂಗಾರು ಮಳೆಯ ಆಗಮನ ಆಗಿರುವುದರಿಂದ ರೈತರು ಸಂತಸಗೊಂಡಿದ್ದಾರೆ. ಬಿತ್ತನೆಗೆ ಸಿದ್ಧತೆ ಕಾರ್ಯ ಮತ್ತಷ್ಟು ಚುರುಕುಗೊಂಡಿದೆ. ವಾತಾವರಣ ಸಂಪೂರ್ಣ ತಂಪಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT