ಶುಕ್ರವಾರ, ಸೆಪ್ಟೆಂಬರ್ 17, 2021
30 °C

ವಿಜಯನಗರ: ಗೃಹರಕ್ಷಕ ದಳದಿಂದ ಅಂಗನವಾಡಿ ದತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇಲ್ಲಿನ ಎಂ.ಜೆ. ನಗರದ ಜ್ಯೋತಿಬಾ ಫುಲೆ ಅಂಗನವಾಡಿ ಕೇಂದ್ರವನ್ನು ತಾಲ್ಲೂಕು ಗೃಹರಕ್ಷಕ ದಳ ಸೋಮವಾರ ದತ್ತು ಸ್ವೀಕರಿಸಿದೆ.

ಗೃಹರಕ್ಷಕ ದಳದ ಘಟಕ ಅಧಿಕಾರಿ ಎಸ್‌.ಎಂ. ಗಿರೀಶ್‌, ಕೇಂದ್ರದ ಮೇಲ್ವಿಚಾರಕಿ ಅನುಪಮಾ ಅವರು ಆವರಣದಲ್ಲಿ ಸಸಿ ನೆಟ್ಟು ನೀರೆರೆದರು.

ಬಳಿಕ ಮಾತನಾಡಿದ ಅನುಪಮಾ, ‘ಗೃಹರಕ್ಷಕ ದಳದವರು ಅಂಗನವಾಡಿ ಕೇಂದ್ರವನ್ನು ದತ್ತು ಸ್ವೀಕರಿಸಿರುವುದು ಸಂತಸದ ವಿಷಯ. ಈ ರೀತಿ ಪ್ರತಿಯೊಬ್ಬರೂ ಆಯಾ ಕೇಂದ್ರಗಳನ್ನು ದತ್ತು ತೆಗೆದುಕೊಂಡರೆ ಅವುಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬಹುದು’ ಎಂದು ಹೇಳಿದರು.

ಮಾಜಿ ನಗರಸಭೆ ಸದಸ್ಯ ಚಂದ್ರಕಾಂತ ಕಾಮತ್‌, ಪ್ಲಟೂನ್‌ ಕಮಾಂಡರ್‌ ವಿ. ಪರಶುರಾಮ್‌, ಗೃಹರಕ್ಷಕರಾದ ವಾಲ್ಯ ನಾಯ್ಕ, ಎಚ್‌. ಮಲ್ಲಪ್ಪ, ಪಿ. ಕೊಟ್ರಪ್ಪ, ಪಿ. ಪಾಂಡುರಂಗ, ಎಚ್‌. ಹುಲುಗಪ್ಪ, ಅಜ್ಜಯ್ಯ, ಕೆ. ಮೈನುದ್ದೀನ್, ರವಿಕುಮಾರ್, ಟಿ. ದುರ್ಗಣ್ಣ, ರಮೇಶ್ ಕುಮಾರ್, ಮಂಜುನಾಥ್, ವಿ. ಅನಿತಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು