ಹೊಸಪೇಟೆ (ವಿಜಯನಗರ): ‘ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ಜ್ಞಾನ ಸಂಪಾದಿಸುವ ಅವಕಾಶ ಕಡಿಮೆಯಾಗುತ್ತಿದೆ, ಅದು ನಶಿಸಿದರೆ ಬಹಳ ಅಪಾಯ ಇದೆ. ತಂತ್ರಜ್ಞಾನದಿಂದಷ್ಟೇ ಬದುಕು ಎಂಬಂತಹ ಮನೋಭಾವದಿಂದ ಹೊರಬರುವ ಅಗತ್ಯ ಇದೆ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರಣ್ಯ ಕ್ಯಾಂಪಸ್ನಲ್ಲಿ ಮಂಗಳವಾರೆ 34ನೇ ನುಡಿಹಬ್ಬದ ಪ್ರಯುಕ್ತ ಪ್ರಸಾರಾಂಗ ಹೊರತಂದ 42 ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

‘ಮಾನವಿಕ ಜ್ಞಾನದ ಅರಿವು ಅತ್ಯಂತ ಅಗತ್ಯ, ಅದಿಲ್ಲದಿದ್ದರೆ ಬದುಕಿನ ಜ್ಞಾನ ಪಡೆಯಲು ಸಾಧ್ಯವಿಲ್ಲ. ನಾನು ತಂತ್ರಜ್ಞಾನದ ವಿರೋಧಿಯಲ್ಲ, ಆದರೆ ತಂತ್ರಜ್ಞಾನವನ್ನು ಹೇಗೆ ಮತ್ತು ಎಷ್ಟು ಬಳಸಬೇಕು ಎಂಬ ಸ್ಪಷ್ಟ ಅರಿವು ನಮಗೆ ಇರಬೇಕು. ಇಂದು ತಂತ್ರಜ್ಞಾನ ಮೇಲುಗೈ ಪಡೆದು ವಿಜ್ಞಾನ ಮೂಲೆಗುಂಪಾಗುತ್ತಿರುವುದು ಸಹ ಆತಂಕಕಾರಿ ಬೆಳವಣಿಗೆ’ ಎಂದರು.

‘ಹಂಪಿ ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು ಸಂಶೋಧನೆಗಾಗಿಯೇ. ಆದರೆ ವಿಶ್ವವಿದ್ಯಾಲಯಗಳು, ಪೀಠಗಳಿಂದ ಎಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಧೋರಣೆ ನೆಲೆಸಿದೆ. ಕನ್ನಡ ವಿಶ್ವವಿದ್ಯಾಲಯ ಎಷ್ಟು ಉದ್ಯೋಗ ಸೃಷ್ಟಿಸಿದೆ ಎಂಬುದರ ಬದಲಿಗೆ ಎಷ್ಟರ ಮಟ್ಟಿಗೆ ಜ್ಞಾನ ಪ್ರಸಾರ ಮಾಡಿದೆ ಎಂಬುದೇ ಮುಖ್ಯವಾಗುತ್ತದೆ. ಹೀಗಾಗಿ ಸರ್ಕಾರ ಸೂಕ್ತ ಅನುದಾನ ಕೊಟ್ಟು ಇಲ್ಲಿನ ಸಂಶೋಧನಾ ಕಾರ್ಯಗಳಿಗೆ ಅಡ್ಡಿ ಆಗದಂತೆ ನೋಡಿಕೊಳ್ಳಬೇಕಿದೆ’ ಎಂದು ಅವರು ಸಲಹೆ ನೀಡಿದರು.

ರಾಜ್ಯದಲ್ಲಿ 6,804 ಸಾರ್ವಜನಿಕ ಗ್ರಂಥಾಲಯಗಳಿದ್ದು, ಅಲ್ಲಿ ಪ್ರಮುಖ ಕೃತಿಗಳನ್ನು ಖರೀದಿಸಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಅನುದಾನ ದೊರೆಯಬೇಕು. ಆಗ ಪುಸ್ತಕಗಳನ್ನು ಓದುವ ಅಭ್ಯಾಸ ಕ್ರಮೇಣ ಹೆಚ್ಚಾಗಲು ಸಾಧ್ಯವಿದೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಪ್ರೊ.ಚಂದ್ರಶೇಖರ ಕಂಬಾರ ಅವರು ಮಾತನಾಡಿ, ‘ವಿಶ್ವವಿದ್ಯಾಲಯದ ಪ್ರಸಾರಾಂಗದ ಪುಸ್ತಕಗಳನ್ನು ಬಿಡುಗಡೆ ಮಾಡಲು ನನ್ನನ್ನು ಆಹ್ವಾನಿಸಿರುವುದರಿಂದ ಖುಷಿಯಾಗಿದೆ, ವಿಶ್ವವಿದ್ಯಾಲಯಕ್ಕೆ ಒಳಿತಾಗಲಿ’ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಕಂಬಾರ ಅವರನ್ನು ಸನ್ಮಾನಿಸಲಾಯಿತು.

ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಪ್ರಸಾರಾಂಗವು ಪ್ರಕಟಿಸಿರುವ 42 ಪುಸ್ತಕಗಳು ಮನುಷ್ಯನ ಬೌದ್ಧಿಕ ಜ್ಞಾನದ ಚಟುವಟಿಕೆಯ ಸಂಕೇತವಾಗಿವೆ ಎಂದರು.

1,753 ಪುಸ್ತಕ ಪ್ರಕಟಣೆ: ಪ್ರಸಾರಾಂಗದ ನಿರ್ದೇಶಕ ಪ್ರೊ.ಪಿ.ಮಹಾದೇವಯ್ಯ ಮಾತನಾಡಿ, ಪ್ರಸಾರಾಂಗವು ಇದುವರೆಗೂ 1,753 ಪುಸ್ತಕಗಳನ್ನು ಪ್ರಕಟಿಸಿದೆ. ನಮ್ಮ ವಿಶ್ವವಿದ್ಯಾಲಯದ ಮತ್ತು ಹೊರಗಿನ ವಿದ್ವಾಂಸರಿಂದ ಪ್ರತಿವರ್ಷ ಪುಸ್ತಕಗಳನ್ನು ಪ್ರಕಟಿಸುತ್ತೇವೆ. ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನ ಮುಂತಾದ ವಿಷಯಗಳ ಕುರಿತು ಪುಸ್ತಕಗಳನ್ನು ಹೊರತರಲಾಗುತ್ತಿದೆ ಎಂದರು.

ಕುಲಸಚಿವ ಪ್ರೊ.ವಿರೂಪಾಕ್ಷಿ ಪೂಜಾರಹಳ್ಳಿ, ಸಹಾಯಕ ಕುಲಸಚಿವ ಎಂ.ಎಂ.ಶಿವಪ್ರಕಾಶ್, ಸಿಂಡಿಕೇಟ್ ಸದಸ್ಯರು ಇದ್ದರು.

ಪುಸ್ತಕಗಳ ಓದಿನ ಪ್ರವೇಶ ಪೂರ್ವಗ್ರಹಗಳಿಂದ ಮುಕ್ತವಾಗಿರಬೇಕು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬೇಕು ಆದರೆ ದ್ವೇಷಗಳಿರಬಾರದು
ಪ್ರೊ.ಬರಗೂರು ರಾಮಚಂದ್ರಪ್ಪ ಸಾಹಿತಿ

ಕಂಬಾರರಿಂದ ಇನ್ನು ಭಾಷಣ ಇರಲ್ಲ

ಪ್ರೊ. ಚಂದ್ರಶೇಖರ ಕಂಬಾರ ಅವರಿಗೆ ಇದೀಗ 90 ವರ್ಷ. ತಾವೇ ಕಟ್ಟಿ ಬೆಳೆಸಿದ ವಿಶ್ವವಿದ್ಯಾಲಯದಿಂದ ಪ್ರೀತಿಯ ಆಹ್ವಾನ ಬಂದಾಗ ಬೆಂಗಳೂರಿನಿಂದ ಪುತ್ರನ ಜತೆಗೆ ವಿದ್ಯಾರಣ್ಯ ಕ್ಯಾಂಪಸ್ಗೆ ಬಂದು ಎರಡು ದಿನ ತಂಗಿದ್ದರು. ಆದರೆ ತಮಗೆ ಈಗ ಸಾರ್ವಜನಿಕವಾಗಿ ಭಾಷಣ ಮಾಡುವಷ್ಟು ನೆನಪಿನ ಶಕ್ತಿ ಇಲ್ಲದಿರುವುದನ್ನು ಅವರೇ ಸ್ವತಃ ಸೋಮವಾರ ಹೇಳಿಕೊಂಡರು. ಹೀಗಿದ್ದರೂ ಅವರ ಲವಲವಿಕೆ ಸಾಹಿತ್ಯ ಪ್ರೀತಿ ಒಂದಿಷ್ಟೂ ಕುಂದಿಲ್ಲ ಎಂಬುದು ಗೊತ್ತಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.