ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಚುನಾವಣೆ:ಪಕ್ಷದ ನಿಧಿಗೆ ಶಕ್ತಿ ತುಂಬುವವರಿಗೇ ಮಣೆ?

Published 14 ಡಿಸೆಂಬರ್ 2023, 15:48 IST
Last Updated 14 ಡಿಸೆಂಬರ್ 2023, 15:48 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ):  ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಶುಕ್ರವಾರ ಮಧ್ಯಾಹ್ನ ಇಲ್ಲಿನ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ನಿಧಿಗೆ ‘ಶಕ್ತಿ’ ತುಂಬವವರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಎರಡು ಬಾರಿ ಕೋರಂ ಕೊರತೆಯಿಂದ ಮುಂದೂಡಿಕೆಯಾಗಿದ್ದ ಚುನಾವಣೆ ಶುಕ್ರವಾರ ನಡೆಯಲೇಬೇಕಿದೆ. ಇಲ್ಲವಾದರೆ ತಾಂತ್ರಿಕ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಕಳೆದ ಮೂರು ದಿನಗಳಿಂದಲೂ ಕಾಂಗ್ರೆಸ್ ಪಕ್ಷದ ವರಿಷ್ಠರು, ಮುಖ್ಯಮಂತ್ರಿ ಅವರ ಸೂಚನೆಗಾಗಿ ಎಲ್ಲಾ ನಿರ್ದೇಶಕರು ಎದುರು ನೋಡುತ್ತಿದ್ದರು. ಅದಕ್ಕಿಂತ ಮೊದಲಾಗಿ ಇಬ್ಬರು ಸಚಿವರ ನೇತೃತ್ವದಲ್ಲಿ ಸಂಧಾನ ಸಭೆ ನಡೆದು ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ.

‘ಎರಡೂ ಬಣದವರು ಕಾಂಗ್ರೆಸ್ ಪಕ್ಷದವರೇ ಆಗಿದ್ದೀರಿ. ಯಾರೇ ಅಧ್ಯಕ್ಷರಾದರೂ ನಮ್ಮ ಚಿಂತೆ ಇಲ್ಲ. ಆದರೆ ಪಕ್ಷದ ನಿಧಿಗೆ ಕೊಡುಗೆ ನೀಡುವುದನ್ನು ಮರೆಯಬೇಡಿ. ಅಂತಹ ಕೊಡುಗೆ ನೀಡುವವರು ಯಾರು ಎಂದು ಪಕ್ಷದ ವರಿಷ್ಠರು ಕೇಳಿದರು. ಒಂದು ಬಣ ಸ್ವಲ್ಪ ಹಿಂಜರಿದರೆ, ಮತ್ತೊಂದು ಬಣ ತಾನು ಸಿದ್ಧ ಎಂದು ಹೇಳಿತು. ಹೀಗಾಗಿ ಅದೇ ಬಣ ತನ್ನ ಪರವಾಗಿ ನಿರ್ದೇಶಕರ ಬಲ ಇರುವಂತೆ ನೋಡಿಕೊಂಡು ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆಯಾಗುವಂತೆ ನೋಡಿಕೊಳ್ಳಬಹುದು’ ಎಂದು ಬ್ಯಾಂಕ್‌ನ ನಿರ್ದೇಶಕರ ಪಾಳದಿಂದ ಮಾಹಿತಿ ಲಭಿಸಿದೆ.

ಅಧ್ಯಕ್ಷ ಸ್ಥಾನಕ್ಕೆ ಹಾಲಿ ಉಪಾಧ್ಯಕ್ಷ ಕೂಡ್ಲಿಗಿಯ ಕೆ.ತಿಪ್ಪೇಸ್ವಾಮಿ ಹಾಗೂ ಸಿರಗುಪ್ಪಾದ ಚೊಕ್ಕ ಬಸವನಗೌಡರು ನಾಮಪತ್ರ ಸಲ್ಲಿಸಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಂಪ್ಲಿಯ ಪಿ,ಮೂಕಯ್ಯಸ್ವಸ್ವಾಮಿ ಹಾಗೂ ಕೊಟ್ಟೂರಿನ ದಾರುಕೇಶ್‌ ನಾಮಪತ್ರ ಸಲ್ಲಿಸಿದ್ದಾರೆ. ನವೆಂಬರ್ 7ರಂದು ಮೊದಲ ಬಾರಿಗೆ ಚುನಾವಣೆ ನಡೆಯಲಿತ್ತು. ಕೋರಂ ಕೊರತೆಯಿಂದ ಅದು ಮುಂದಕ್ಕೆ  ಹೋಗಿ ನ.18ಕ್ಕೆ ಮುಂದೂಡಿಕೆಯಾಗಿತ್ತು. ಅಂದು ಸಹ ಕೋರಂ ಕೊರತೆಯಾದ ಕಾರಣ ಡಿ.15ಕ್ಕೆ ಮೂರನೇ ಬಾರಿಗೆ ಚುನಾವಣೆ ನಿಗದಿಯಾಗಿದೆ.

ಚೊಕ್ಕಬಸವನಗೌಡ
ಚೊಕ್ಕಬಸವನಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT