ಘಟನೆ ವಿವರ:
ನಂದಿಬಂಡಿ ಗ್ರಾಮದ ಪುಷ್ಪ ಹಾಗೂ ಅವರ ಮನೆಯವರು ಶನಿವಾರ ಬೆಳಿಗ್ಗೆ 10ಗಂಟೆಗೆ ಮನೆಯ ಬೀಗ ಹಾಕಿ ಕೆಲಕ್ಕೆ ಹೋಗಿದ್ದಾರೆ. ಮಧ್ಯಾಹ್ನ ಮನೆಗೆ ವಾಪಾಸು ಬಂದಾಗ ಮನೆ ಕಳ್ಳತನವಾಗಿದ್ದು ಗೊತ್ತಾಗಿದೆ. ಮನೆಯ ಬೀಗ ಮುರಿದು ಒಳಗಡೆಯಿದ್ದ ಅಲೆಮಾರದಲ್ಲಿದ್ದ ₹25ಸಾವಿರ ಮೌಲ್ಯದ 4 ಗ್ರಾಂ ಚಿನ್ನದ ಬೆಂಡೋಲೆ, ₹10ಸಾವಿರ ಮೌಲ್ಯದ 2 ಗ್ರಾಂ ಚಿನ್ನದುಂಗುರ, ಸಾವಿರ ರೂಪಾಯಿ ಬೆಲೆಬಾಳುವ ಮೂಗುತಿ, ₹17ಸಾವಿರ ಮೌಲ್ಯದ 27ಗ್ರಾಂನ ಎರಡು ಜೊತೆ ಬೆಳ್ಳಿ ಕಾಲುಗೆಜ್ಜೆ ಹಾಗೂ ₹15ಸಾವಿರ ನಗದು ಸೇರಿದಂತೆ ಒಟ್ಟು ₹68ಸಾವಿರ ನಗದು ಹಾಗೂ ಆಭರಣಗಳನ್ನು ಕಳ್ಳತನವಾದ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.