ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಹುಣ್ಣಿಮೆ: ಸಂಭ್ರಮದ ಗುರುಕೆಂಪೇಶ್ವರ ರಥೋತ್ಸವ

Last Updated 14 ಜೂನ್ 2022, 14:12 IST
ಅಕ್ಷರ ಗಾತ್ರ

ಹರಪನಹಳ್ಳಿ: ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಪಟ್ಟಣದ ಮೇಗಳಪೇಟೆ ಗುರು ಕೆಂಪೇಶ್ವರ ರಥೋತ್ಸವ ಮಂಗಳವಾರ ಸಂಜೆ ಸಡಗರ, ಸಂಭ್ರಮದಿಂದ ನೆರವೇರಿತು.

ಕಾರಹುಣ್ಣಿಮೆ ದಿನದಂದು ಬೆಳಿಗ್ಗೆ ಕೆಂಪೇಶ್ವರ ಸ್ವಾಮಿಗೆ ರುದ್ರಾಭಿಷೇಕ ನಡೆಯಿತು. ಸಂಜೆ ಸ್ವಾಮಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಿ ಸಕಲ ವಾಧ್ಯಮೇಳ, ಹರ್ಷೋದ್ಗಾರಗಳ ನಡುವೆ ಮೆರವಣಿಗೆ ರಥದ ಬಳಿ ಆಗಮಿಸಿ, ಮೂರು ಸುತ್ತು ಪ್ರದಕ್ಷಿಣೆ ಹಾಕಿದರು, ಸ್ವಾಮಿ ಧ್ವಜ ಹರಾಜು ಹಾಕಿದ ಬಳಿಕ ಪೂರ್ವಾಭಿಮುಖವಾಗಿ ರಥವನ್ನು ಎಳೆದು, ಆಂಜನೇಯ ಸ್ವಾಮಿ ದೇವಸ್ಥಾನದವರೆಗೂ ಸಾಗಿತು. ಅಲ್ಲಿಂದ ಪುನಃ ಕೆಂಪೇಶ್ವರ ದೇವಸ್ಥಾನಕ್ಕೆ ಆಗಮಿಸಿ ಸಂಪನ್ನಗೊಂಡಿತು.

ನೆರೆದಿದ್ದ ಭಕ್ತ ಸಮೂಹ ರಥಕ್ಕೆ ಬಾಳೆ ಹಣ್ಣು ಎಸೆದು, ಚಕ್ರಕ್ಕೆ ತೆಂಗಿನಕಾಯಿ ಹೊಡೆದು ಭಕ್ತಿ ಸಲ್ಲಿಸಿದರು.ದೇವಸ್ಥಾನ ಸಮಿತಿಯ ವಾಗೀಶಸ್ವಾಮಿ, ಎಂ.ರಾಜಶೇಖರ್, ಪಟೇಲ್ ಬೆಟ್ಟನಗೌಡ, ಪಿ.ಬಿ.ಗೌಡ, ಎಲ್.ಕೊಟ್ರೇಶ್, ಕೊಟಗಿ ಕರಿಬಸಪ್ಪ, ಕೊಟಗಿ ಈಶಣ್ಣ, ಓಂಕಾರೇಶ್ವರಗೌಡ, ಸಾವಳಗಿ ವಿಶ್ವನಾಥ, ಶಿವರಾಜ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT