ಹೊಸಪೇಟೆ (ವಿಜಯನಗರ): ಪರಸ್ಪರ ವಾಗ್ವಾದ, ಗದ್ದಲದ ನಡುವೆ ನಗರ ಹೊರವಲಯದ ಜಂಬುನಾಥಹಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ಕಾರಿ ಆಸ್ಪತ್ರೆಗೆ 20 ಎಕರೆ ಜಮೀನು ಹಸ್ತಾಂತರಿಸುವ ತೀರ್ಮಾನ ಶನಿವಾರ ನಗರದಲ್ಲಿ ನಡೆದ ನಗರಸಭೆ ವಿಶೇಷ ತುರ್ತು ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.

ಜಂಬುನಾಥಹಳ್ಳಿ ಸಮೀಪ ನಗರಸಭೆಗೆ ಸೇರಿದ 25 ಎಕರೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಹೆಸರಿನಲ್ಲಿ 25 ಎಕರೆ ಜಮೀನು ಇದೆ. ನಗರಸಭೆಗೆ ಸೇರಿದ ಒಟ್ಟು ಜಮೀನಿನಲ್ಲಿ ಈಗಾಗಲೇ 5 ಎಕರೆ ಜಮೀನು ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಹಸ್ತಾಂತರಿಸಲಾಗಿದೆ. ಇನ್ನುಳಿದ 20 ಎಕರೆ ಜಾಗ ಹಸ್ತಾಂತರಿಸುವ ಸಂಬಂಧ ಸದಸ್ಯರು ತಮ್ಮ ನಿರ್ಧಾರ ತಿಳಿಸಬೇಕೆಂದು ನಗರಸಭೆ ಪೌರಾಯುಕ್ತ ಮನೋಹರ್ ನಾಗರಾಜ ಅವರು ತಿಳಿಸಿದರು.

ಪಕ್ಷೇತರ ಸದಸ್ಯ ಅಬ್ದುಲ್ ಖದೀರ್ ಮಾತನಾಡಿ, ಜಂಬುನಾಥಹಳ್ಳಿಯಲ್ಲಿ ನಗರಸಭೆಗೆ ಸೇರಿದ ಜಮೀನಿನಲ್ಲಿ ಬಡವರಿಗೆ ನಿವೇಶನ ನಿರ್ಮಿಸಿಕೊಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು 2018ರಲ್ಲಿ ಭರವಸೆ ಕೊಟ್ಟು ಚುನಾವಣೆಯಲ್ಲಿ ಗೆದ್ದಿದ್ದರು. ಅದರ ದಾಖಲೆಗಳು ಈಗಲೂ ನನ್ನ ಬಳಿ ಇವೆ. ನಗರಸಭೆಯನ್ನು ಮಹಾನಗರ ಪಾಲಿಕೆ ಮಾಡುವುದಾಗಿ ಸಚಿವರು ಈಗ ಹೇಳುತ್ತಿದ್ದಾರೆ. ಹಾಗಿದ್ದರೆ ಬಡವರಿಗೆ ನಿವೇಶನ ಎಲ್ಲಿ ಕೊಡಬೇಕು? ಎಲ್ಲರೂ ಸೇರಿಕೊಂಡು ಈ ಕುರಿತು ಸಚಿವರೊಂದಿಗೆ ಮಾತನಾಡಬಹುದು. ಸಚಿವರು ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು. ನಗರಸಭೆ ಹೆಸರಿನಲ್ಲಿ ಸುಳ್ಳು ಹಕ್ಕುಪತ್ರ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಬಿಜೆಪಿ ಸದಸ್ಯರಾದ ತಾರಿಹಳ್ಳಿ ಜಂಬುನಾಥ, ರಮೇಶ ಗುಪ್ತಾ, ಸರ್ಕಾರಿ ಆಸ್ಪತ್ರೆಗೆ ಜಮೀನು ಹಸ್ತಾಂತರಿಸುವ ಕೆಲಸ ಉತ್ತಮವಾದುದು. ಇದರಿಂದ ಬಡವರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು. ‘ಒಬ್ಬರು ಮಾತನಾಡುವಾಗ ನೀವು ಮಧ್ಯದಲ್ಲಿ ಮಾತಾಡಬಾರದು’ ಎಂದು ಪಕ್ಷೇತರ ಸದಸ್ಯ ಎಚ್.ಎಲ್. ಸಂತೋಷ್ ಕುಮಾರ್ ಹೇಳಿ ಅಬ್ದುಲ್ ಖದೀರ್ ಅವರ ಬೆಂಬಲಕ್ಕೆ ಬಂದರು. ಆಗ, ಬಿಜೆಪಿ ಸದಸ್ಯರಾದ ಜೀವರತ್ನಂ, ಮಂಜುನಾಥ, ರಮೇಶ ಗುಪ್ತಾ, ತಾರಿಹಳ್ಳಿ ಜಂಬುನಾಥ ಅವರು ಆಕ್ಷೇಪ ವ್ಯಕ್ತಪಡಿಸಿದರು. ಪರಸ್ಪರರ ನಡುವೆ ಮಾತಿನ ಚಕಮಕಿ ನಡೆಯಿತು. ಇಡೀ ಸಭೆ ಗದ್ದಲದ ಗೂಡಾಯಿತು. ಯಾರು, ಏನು ಮಾತನಾಡುತ್ತಿದ್ದಾರೆ ಎನ್ನುವುದು ಗೊತ್ತಾಗಲಿಲ್ಲ.

ಇದರ ನಡುವೆ ಪೌರಾಯುಕ್ತರು, ಕೋರಂ ಮೂಲಕ ವಿಷಯ ನಿರ್ಧರಿಸೋಣ ಎಂದರು. ಜಮೀನು ಹಸ್ತಾಂತರದ ಪರ ಇರುವವರು ಕೈ ಎತ್ತಬೇಕೆಂದು ತಿಳಿಸಿದರು. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು. ಪುನಃ ಸದಸ್ಯರ ನಡುವೆ ಮಾತಿನ ಚಕಮಕಿ ಉಂಟಾಯಿತು. ಗದ್ದಲದ ನಡುವೆ ಹೆಚ್ಚಿನ ಸದಸ್ಯರು ಕೈ ಎತ್ತುವುದರ ಮೂಲಕ ಒಪ್ಪಿಗೆ ಸೂಚಿಸಿದರು. ‘ಹೆಚ್ಚಿನ ಸದಸ್ಯರು ಜಮೀನು ಹಸ್ತಾಂತರದ ಪರ ಇದ್ದಾರೆ. ಈ ವಿಷಯವನ್ನು ಓದಿ, ಒಪ್ಪಲಾಗಿದೆ’ ಎಂದು ಪೌರಾಯುಕ್ತರು ಘೋಷಿಸಿ ಸಭೆ ಮೊಟಕುಗೊಳಿಸಿದರು. ನಗರಸಭೆ ಅಧ್ಯಕ್ಷೆ ಸುಂಕಮ್ಮ ಅಧ್ಯಕ್ಷತೆ ವಹಿಸಿದ್ದರು.

/ಬಾಕ್ಸ್/

‘ವರ್ಗಾವಣೆಗೆ ಸರ್ಕಾರಕ್ಕೆ ಪತ್ರ ಬರೆಯಿರಿ’

‘ಒಂದೂವರೆ ತಿಂಗಳಾದರೂ ನಗರಸಭೆ ಸಾಮಾನ್ಯ ಸಭೆ ಕರೆದಿಲ್ಲ. ಪ್ರತಿ ತಿಂಗಳು ಸಭೆ ಕರೆಯಬೇಕೆಂದು ಹಿಂದಿನ ಸಭೆಯಲ್ಲಿ ನೀವೇ ತಿಳಿಸಿದ್ದೀರಿ. ಸಭೆ ಕರೆಯದಿದ್ದರೆ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದು ಹೇಗೆ? ಒಂದು ವಾರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದೀರಿ. ಈಗಲೂ ಬಗೆಹರಿದಿಲ್ಲ. ನಿಮ್ಮನ್ನು ಹೇಗೆ ನಂಬುವುದು’ ಎಂದು ಸದಸ್ಯೆ ಲತಾ ಅವರು ಪೌರಾಯುಕ್ತರನ್ನು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಮನೋಹರ್ ನಾಗರಾಜ, ‘ಮೂರು ತಿಂಗಳಲ್ಲಿ ಕೆಲಸ ಮಾಡಲಾಗುವುದು. ಮಾಡದಿದ್ದರೆ ಇವರನ್ನು ವರ್ಗಾವಣೆ ಮಾಡಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಿರಿ’ ಎಂದು ಸಲಹೆ ನೀಡಿದಾಗ ಕೆಲ ಸದಸ್ಯರು ಮುಗುಳ್ನಕ್ಕರು.

'ದಿಲ್ ಚಾಹ್ತಾ ಹೈ' ಎಂದ ಸಚಿನ್ ತೆಂಡೂಲ್ಕರ್, ಕುಂಬ್ಳೆ, ಯುವರಾಜ್ ಸಿಂಗ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.