ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಮಲಪನಗುಡಿ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆ, ಹೊಸಪೇಟೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ 2024–25ನೇ ಸಾಲಿನ ಗಿರಿಜನ ಉಪಯೋಜನೆಯಡಿಯಲ್ಲಿ ಸಂಗೀತ, ನೃತ್ಯ, ನಾಟಕೋತ್ಸವ ನಡೆಯಿತು.

ಬದುಕಿನಲ್ಲಿ ಮುಳುಗಿ ಹೋದ ಜೀವಕೆ ಹಾಸ್ಯದ ಮೂಲಕ ಮನಸ್ಸಿಗೆ ಚೇತೋಹಾರಿ ಅನುಭವ ನೀಡುತ್ತವೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಮುಖಂಡ ಎಲ್.ಸಿದ್ಧನಗೌಡ್ರು ಹೇಳಿದರು.

ಶ್ರೀ ವಾಲ್ಮೀಕಿ ಮಹಿಳಾ ಕಲಾ ಸಂಸ್ಥೆಯ ಅಧ್ಯಕ್ಷೆ ವಿ.ಅನುರಾಧ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್.ಎಸ್. ಶಿವಗಂಗ, ಹಿಂದುಳಿದ ವರ್ಗಗಳ ಒಕ್ಕೂಟದ ರವಿಶಂಕರ ದೇವರಮನೆ ಇದ್ದರು.

ಹೊಸಪೇಟೆಯ ಕೆ.ಚೈತ್ರ ಅವರಿಂದ ಸುಗಮ ಸಂಗೀತ, ಅಂಜಲಿ ನಾಟ್ಯ ಕಲಾ ಕೇಂದ್ರದವರಿಂದ ಭರತ ನಾಟ್ಯ, ಅಂಕ್ಲೇಶ ಕಲಾ ತಂಡದಿಂದ ರಂಗ ಗೀತೆಗಳು, ಬಳ್ಳಾರಿಯ ವೀರೇಶ ದಳವಾಯಿ ಕಲಾ ತಂಡದಿಂದ ಜನಪದ ಗೀತೆ, ಹಂಪಿಯ ರಂಜು ಆರ್ಟ್ಸ್ ಮಕ್ಕಳಿಂದ ಯೋಗ ನೃತ್ಯ ನಡೆದೆವು. ನಂತರ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆಯವರಿಂದ ‘ಸಂಸಾರದಲ್ಲಿ ಸ ನಿ ದ ಪ’ ನಾಟಕ ಪ್ರದರ್ಶನವಾಯಿತು. ಚಳಯಲ್ಲೂ ಸಹ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.