ಬುಧವಾರ, ಡಿಸೆಂಬರ್ 8, 2021
18 °C

ಕೂಡ್ಲಿಗಿ: ಹಿರೇಹೆಗ್ಡಾಳ್‌ನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಹೆಗ್ಡಾಳ್/ಕೂಡ್ಲಿಗಿ: ಜಿಲ್ಲಾಧಿಕಾರಿ‌ ಅನಿರುದ್ಧ್ ಪಿ. ಶ್ರವಣ್ ಅವರ ಗ್ರಾಮ ವಾಸ್ತವ್ಯ ಶನಿವಾರ ಇಲ್ಲಿ ಆರಂಭಗೊಂಡಿದೆ.
ಹತ್ತು ಗಂಟೆಗೆ ಆರಂಭವಾಗಬೇಕಿದ್ದ ಗ್ರಾಮ ವಾಸ್ತವ್ಯ 11.20ಕ್ಕೆ ಶುರುವಾಯಿತು. ಗ್ರಾಮಕ್ಕೆ ಬಂದ ಜಿಲ್ಲಾಧಿಕಾತಿಗೆ ಸ್ಥಳೀಯ ಮಹಿಳೆಯರು ಗುಲಾಬಿ ಹೂ ಕೊಟ್ಟು ಸ್ವಾಗತಿಸಿದರು.

ಬಳಿಕ ಅವರು ಅಂಬೇಡ್ಕರ್ ನಗರಕ್ಕೆ ಭೇಟಿ ನೀಡಿದರು. ಅಲ್ಲಿ ಪುನರ್ವಸತಿ ಕಲ್ಪಿತ ದೇವದಾಸಿಯರನ್ನು ಭೇಟಿಯಾಗಿ ಅವರ ಸಮಸ್ಯೆ ಆಲಿಸಿದರು. ನಂತರ ಸರ್ಕಾರಿ ಶಾಲೆಯ ನೂತನ ಕೊಠಡಿ ಉದ್ಘಾಟಿಸಿದರು.

ಜಿಲ್ಲಾಧಿಕಾರಿ ಭೇಟಿ ಹಿನ್ನೆಲೆಯಲ್ಲಿ ಗ್ರಾಮವನ್ನು ಸ್ವಚ್ಛಗೊಳಿಸಲಾಗಿದೆ. ಎಲ್ಲೆಡೆ ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗಿದೆ. ತಹಶೀಲ್ದಾರ್ ಜಗದೀಶ, ಇಒ ಬಸಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ, ಡಿವೈಎಸ್ಪಿ ಜಿ.ಹರೀಶ ಇದ್ದಾರೆ.

ಸದ್ಯ ಜಿಲ್ಲಾಧಿಕಾರಿ ಗ್ರಾಮ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಬಳಿಕ ಸರ್ಕಾರಿ ಶಾಲೆಯ ಆವರಣದಲ್ಲಿ ಗ್ರಾಮಸ್ಥರ ಸಮಸ್ಯೆ ಆಲಿಸುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು