ಎಂ.ಪಿ.ಪ್ರಕಾಶ್ ರಂಗಮಂದಿರ ಬಳಕೆ?
‘ನಗರಸಭೆ ಕಚೇರಿ ಆವರಣದಲ್ಲಿರುವ ಎಂ.ಪಿ.ಪ್ರಕಾಶ್ ರಂಗಮಂದಿರ ನಿರ್ಮಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ರಂಗಮಂದಿರದ ಬಳಕೆಯೇ ಆಗಿಲ್ಲ. ಇದೀಗ ಅದನ್ನು ತಾತ್ಕಾಲಿಕವಾಗಿ ಬಳಸುವ ವಿಚಾರ ಇದೆ. ಅಲ್ಲಿ ಇಟ್ಟಿರುವ ವಸ್ತುಗಳನ್ನು ತೆರವುಗೊಳಿಸಲು ನಗರಸಭೆಯವರು ಒಪ್ಪಿದ್ದಾರೆ. ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಅಲ್ಲಿ ನಡೆಸಲಾಗುವುದು. ಸುಮಾರು ಒಂದು ವರ್ಷ ಅದನ್ನು ಬಳಸಿಕೊಂಡು ಹೊಸ ರಂಗಮಂದಿರ ನಿರ್ಮಾಣಗೊಂಡ ಬಳಿಕ ಇದನ್ನು ಬೇರೆ ಯಾವ ಉದ್ದೇಶಕ್ಕೆ ಬಳಸಬಹುದು ಎಂದು ತೀರ್ಮಾನಿಸಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ್ ತಿಳಿಸಿದರು.