ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ | ಧರ್ಮಸಾಗರ ಗ್ರಾಮ: ಮಗುವಿಗೆ ಹುಚ್ಚುನಾಯಿ ಕಡಿತ

Published : 17 ಸೆಪ್ಟೆಂಬರ್ 2024, 15:28 IST
Last Updated : 17 ಸೆಪ್ಟೆಂಬರ್ 2024, 15:28 IST
ಫಾಲೋ ಮಾಡಿ
Comments

ಹೊಸಪೇಟೆ : ತಾಲ್ಲೂಕಿನ  ಧರ್ಮಸಾಗರದ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಮೂರು ವರ್ಷದ ಬಾಲಕಿಗೆ ಹುಚ್ಚುನಾಯಿ ಕಡಿದಿದೆ.

ಸ್ಥಳೀಯ ನಿವಾಸಿಗಳಾದ ರಾಮ ಮತ್ತು ಲೋಕಮ್ಮ ದಂಪತಿಯ ಪುತ್ರಿ ಜನನಿ ಗಾಯಗೊಂಡ ಮಗು. ಆಕೆಯನ್ನು ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಬಿಮ್ಸ್‌ ಆಸ್ಪತ್ರೆಗೆ ಕಳುಹಿಸಲಾಗಿದೆ.

‘ಬಾಲಕಿ ಅಪಾಯದಿಂದ ಪಾರಾಗಿದ್ದರೂ ಮುಖ, ಗಂಟಲಿನ ಭಾಗದಲ್ಲಿ ಆಳವಾದ ಗಾಯವಾಗಿದೆ. ಮಣಿಕಂಠ ಎಂಬ 20 ವರ್ಷದ ಯುವಕನಿಗೂ ನಾಯಿ ಕಚ್ಚಿದೆ. ಚಿಕ್ಕಪುಟ್ಟ ಗಾಯವಾಗಿರುವ ಅವರಿಗೆ ಇಲ್ಲೇ ಚಿಕಿತ್ಸೆ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಲ್.ಆರ್‌. ಶಂಕರ್ ನಾಯ್ಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಸಕರಿಂದ ₹20 ಸಾವಿರ ನೆರವು: ಶಾಸಕ ಎಚ್‌.ಆರ್.ಗವಿಯಪ್ಪ ಅವರು ಮಗುವಿನ ಪೋಷಕರಿಗೆ ವೈಯಕ್ತಿಕವಾಗಿ ₹20 ಸಾವಿರದ ನೆರವು ‌ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT