ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಡು ಬಿಸಿಲಲ್ಲೂ ಕಾರ್ಯಕರ್ತರ ಹುರಿದುಂಬಿಸಿದ ಡಾ.ಪ್ರಭಾ ಮಲ್ಲಿಕಾರ್ಜುನ್

Published 30 ಮಾರ್ಚ್ 2024, 15:34 IST
Last Updated 30 ಮಾರ್ಚ್ 2024, 15:34 IST
ಅಕ್ಷರ ಗಾತ್ರ

ಹರಪನಹಳ್ಳಿ: ದಾವಣಗೆರೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಶನಿವಾರ ಪಟ್ಟಣಕ್ಕೆ ಆಗಮಿಸಿ ಸುಡು ಬಿಸಿಲಿನಲ್ಲೂ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಕೋಟೆ ಆಂಜನೇಯ ಸ್ವಾಮಿ, ದೇವರ ತಿಮ್ಲಾಪುರದ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬೇಟಿಕೊಟ್ಟರು. ಅಲ್ಲಿಂದ ಬಾಪೂಜಿನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ, ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿದರು.

‘ನನ್ನನ್ನು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೆಂಡತಿ, ಶಾಮನೂರು ಶಿವಶಂಕರಪ್ಪ ಅವರ ಸೊಸೆ ಎಂದು ಜನ ಗುರುತಿಸುತ್ತಾರೆ. ಆದರೆ ನಾನು ಅದರಾಚೆಗೂ ಕೆಲಸ ಮಾಡುತ್ತಿರುವೆ. ಸ್ವತಃ ಸ್ಥಾಪಿಸಿರುವ ಟ್ರಸ್ಟ್ ಮೂಲಕ ಸಾವಿರಾರು ಮಂದಿಗೆ ನೆರವು ನೀಡಿದ್ದೇನೆ. 2019ರಿಂದ ಸಮಾಜಮುಖಿ ಕೆಲಸಗಳ ಮೂಲಕ ನೊಂದ ಜನರ ನೆರವಿಗೆ ಸಾಕಷ್ಟು ಕೆಲಸ ಮಾಡಿರುವೆ. ಈಗ ಚುನಾವಣೆಯಲ್ಲೂ ಗೆಲ್ಲುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ಜಯಸಾಧಿಸಿದರೆ ಇಲ್ಲಿಯ ಶಾಸಕರಾದ ಲತಾ ಮಲ್ಲಿಕಾರ್ಜುನ್ ಅವರೊಟ್ಟಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಂ.ಪಿ.ಲತಾ ಮಲ್ಲಿಕಾರ್ಜುನ್, ‘ಗ್ಯಾರಂಟಿಗಳಿಂದ ಸರ್ಕಾರ ದಿವಾಳಿ ಆಗಿದೆ ಎನ್ನುವವರ ಮಾತಿಗೆ ಕಿವಿಗೊಡದೇ, ಎಲ್ಲರೂ ಒಗ್ಗಟ್ಟಾಗಿ ಗ್ಯಾರಂಟಿ ಯೋಜನೆಗಳ ಅರಿವು ಮೂಡಿಸಿ ಚುನಾವಣೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಿ’ ಎಂದು ಮತಯಾಚಿಸಿದರು.

ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಲಂಬಾಣಿ ಮಹಿಳೆಯರು ಶಾಲು ಹೊದಿಸಿದರು. ಕುರುಬ ಸಮಾಜದಿಂದ ಕಂಬಳಿ ಮತ್ತು ಕುರಿಮರಿ ಉಡುಗೊರೆ ನೀಡಿ ಸನ್ಮಾನಿಸಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಕೊಂಡಯ್ಯ, ವಿಜಯನಗರ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್ ಶೇಖ್, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಹಿರಿಯ ಮುಖಂಡರಾದ ಚಂದ್ರಶೇಖರ ಭಟ್, ಮಹಾಬಲೇಶ್ವರ ಗೌಡ, ಎಚ್.ಎಂ.ಮಲ್ಲಿಕಾರ್ಜುನ್, ಕೋಡಿಹಳ್ಳಿ ಭೀಮಪ್ಪ, ಎಂ.ರಾಜಶೇಖರ, ಕಮ್ಮತ್ತಹಳ್ಳಿ ಮಂಜುನಾಥ್, ಎಂ.ವಿ.ಅಂಜಿನಪ್ಪ, ಕುಬೇರಪ್ಪ, ಉದಯಶಂಕರ ಮಾತನಾಡಿದರು.

ಮುಖಂಡರಾದ ಅಂಜಿನಪ್ಪ, ಹುಲಿಕಟ್ಟೆ ಚಂದ್ರಪ್ಪ, ಜಯಲಕ್ಷ್ಮಿ, ಮತ್ತೂರು ಬಸವರಾಜ್, ಒ,ರಾಮಪ್ಪ, ವೈಕೆಬಿ ದುರುಗಪ್ಪ, ನಾಗರಾಜ್, ಶಿವರಾಜ್, ಶಂಕರ, ಮೃತ್ಯುಂಜಯ, ಹಲಗೇರಿ ಮಂಜಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT