ಹೊಸಪೇಟೆ (ವಿಜಯನಗರ): ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಮುಂಭಾಗ ಬಿರುಕು ಬಿಟ್ಟಿರುವ ಗೋಪುರದ ಸಮಗ್ರ ಸಂರಕ್ಷಣೆಗೆ 3ಡಿ ಮಾದರಿ ಸಿದ್ಧಪಡಿಸಲು ಸೋಮವಾರದಿಂದ ಆರಂಭವಾಗಿದ್ದ ಡ್ರೋನ್ ಕ್ಯಾಮೆರಾ ಒಳಗೊಂಡ ಡಿಫರೆನ್ಷಿಯಲ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಡಿಪಿಎಸ್) ಮತ್ತು ಲಿಡಾರ್ ಸಮೀಕ್ಷೆ ಮಂಗಳವಾರ ಮಧ್ಯಾಹ್ನ ಕೊನೆಗೊಂಡಿತು.

‘ಈ 3ಡಿ ಮಾದರಿ ಸಮೀಕ್ಷೆ ಸೆಂಟಿಮೀಟರ್ ಅಳತೆಯಲ್ಲೂ ನ್ಯೂನತೆ ಬರದಂತಹ ಕರಾರುವಕ್ಕಾದ ಚಿತ್ರಣ ನೀಡುತ್ತದೆ. ಮುಂದಿನ ದಿನಗಳಲ್ಲಿ ಗೋಪುರದ ದುರಸ್ತಿ ಕಾರ್ಯಗಳ ಯೋಜನೆ ರೂಪಿಸುವುದಕ್ಕೆ ನೆರವಾಗಲಿದೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಹಂಪಿ ವೃತ್ತದ ಅಧೀಕ್ಷಕ ನಿಹಿಲ್ ದಾಸ್ ತಿಳಿಸಿದ್ದಾರೆ.

‘3ಡಿ ಮಾದರಿ ಸಿದ್ಧಗೊಂಡ ಬಳಿಕ ಬಿರುಕು ಮುಚ್ಚುವ ಮತ್ತು ಗೋಪುರದ ಸಂಪೂರ್ಣ ಸಂರಕ್ಷಣೆಯ ಯೋಜನೆ ರೂಪಿಸಲಾಗುವುದು. ಇದಕ್ಕೆ ಬಹಳ ಸಮಯ ಬೇಕಾಗಬಹುದು’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಡ್ರೋನ್ ಸರ್ವೆ ಕೊನೆಗೊಂಡ ಕಾರಣ ಮಂಗಳವಾರ ಮಧ್ಯಾಹ್ನದಿಂದ ಸಾರ್ವಜನಿಕರಿಗೆ ಇದೇ ಗೋಪುರದ ಮೂಲಕ ದೇವಸ್ಥಾನಕ್ಕೆ ತೆರಳಲು ಅವಕಾಶ ಕಲ್ಪಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.