ಹೊಸಪೇಟೆ (ವಿಜಯನಗರ): ಕೇಂದ್ರ ಸರ್ಕಾರದ 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಗಡಿಯಾ, ಸದಸ್ಯರು, ನಿರ್ದೇಶಕರು ಮತ್ತು ಕಾರ್ಯದರ್ಶಿ ಅವರನ್ನು ಒಳಗೊಂಡ ನಿಯೋಗ ಶುಕ್ರವಾರ ಐತಿಹಾಸಿಕ ಹಂಪಿಗೆ ಭೇಟಿ ನೀಡಿ, ಅಲ್ಲಿನ ಸೌಂದರ್ಯ ಕಂಡು ಪುಳಕಿತಗೊಂಡಿತು.
ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ತೋರಣಗಲ್ ವಿಮಾನನಿಲ್ದಾಣಕ್ಕೆ ಬಂದ ತಂಡ ಬಳಿಕ ವಿಶೇಷ ವಾಹನದಲ್ಲಿ ಹಂಪಿಗೆ ಆಗಮಿಸಿತ್ತು. ಮೊದಲಿಗೆ ವಿಜಯ ವಿಠ್ಠಲ ದೇವಸ್ಥಾನದ ಸೌಂದರ್ಯ ಸವಿದ ತಂಡ, ಬಳಿಕ ವಿರೂಪಾಕ್ಷ ದೇವಸ್ಥಾನಕ್ಕೆ ತೆರಳಿ ಅಲ್ಲಿನ ವೈಭವ ಕಣ್ತುಂಬಿಕೊಂಡಿತು.
ನಿಯೋಗದಲ್ಲಿ ಆಯೋಗದ ಸದಸ್ಯರಾದ ಅಜಯ್ ನಾರಾಯಣ ಝಾ, ಅನ್ನಿ ಜಾರ್ಜ್ ಮ್ಯಾಥ್ಯೂ, ಸೌಮ್ಯ ಕಟಿ ಘೋಷ್, ಮನೋಜ್ ಪಾಂಡಾ, ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ, ಜಂಟಿ ನಿರ್ದೇಶಕ ರಾಹುಲ್ ಜೈನ್, ಉಪ ಕಾರ್ಯದರ್ಶಿ ಅಜಿತ್ ಕುಮಾರ್ ರಂಜನ್ ಇತರರು ಇದ್ದರು.
ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತಿಕ್, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಎಸ್‌ಪಿ ಶ್ರೀಹರಿಬಾಬು ಬಿ.ಎಲ್., ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್ ಅಲಿ ಅಕ್ರಮ ಷಾ ಇತರರು ಇದ್ದರು.