ಹೊಸಪೇಟೆ (ವಿಜಯನಗರ): ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಗೆ ಆಗಮಿಸಿದ ಸದಸ್ಯ ಹಾಗೂ ಅತಿಥಿ ರಾಷ್ಟ್ರಗಳ ಅತ್ಯುನ್ನತ ಪ್ರತಿನಿಧಿಗಳು ಸೋಮವಾರ ಸಂಜೆ ಐತಿಹಾಸಿಕ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿ (ಕೊರಾಕಲ್ ರೈಡ್) ಮಾಡಿದರು.
ಬೆಳಗ್ಗಿನಿಂದ ನಡೆದ ಸಭೆಯ ನಂತರ ಸಂಜೆ ವೇಳೆ ಹಂಪಿಗೆ ಆಗಮಿಸಿದ ಅತ್ಯುನ್ನತ ಪ್ರತಿನಿಧಿಗಳು ಹಂಪಿಯ ಚಕ್ರತೀರ್ಥದ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿಯ ಕೈಗೊಂಡು ಹಂಪಿಯ ಕಲ್ಲುಬಂಡೆ, ನದಿಯ ಪ್ರಾಕೃತಿಕ ಸೌಂದರ್ಯ ಸವಿದರು.