ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲ ಹಿನ್ನೆಲೆ ಹಂಪಿ ಉತ್ಸವ ರದ್ದು: ಶಾಸಕ ಗವಿಯಪ್ಪ ಸುಳಿವು

Published 17 ಸೆಪ್ಟೆಂಬರ್ 2023, 6:57 IST
Last Updated 17 ಸೆಪ್ಟೆಂಬರ್ 2023, 6:57 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿಯ ಹಂಪಿ ಉತ್ಸವವನ್ನು ಸಂಪೂರ್ಣ ರದ್ದುಪಡಿಸಿರುವ ಕುರಿತು ಶಾಸಕ ಎಚ್‌.ಆರ್‌.ಗವಿಯಪ್ಪ ಸುಳಿವು ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಪ್ರಯುಕ್ತ ಭಾನುವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ, ಭಾಷಣ ಮುಗಿದ ಬಳಿಕ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬರಗಾಲದಿಂದ ಕುಡಿಯಲು ಸಹ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಹೀಗಾಗಿ ನವೆಂಬರ್‌ನಿಂದ ಫೆಬ್ರುವರಿಗೆ ಮುಂದೂಡಲಾಗಿದ್ದ ಹಂಪಿ ಉತ್ಸವ ಈ ವರ್ಷ ನಡೆಯದೆ ಮುಂದಿನ ವರ್ಷಕ್ಕೆ ಮುಂದೂಡಲಾಗಿರುವ ಬಗ್ಗೆ ನನಗೆ ಮಾಹಿತಿ ಲಭಿಸಿದೆ’ ಎಂದರು.

‘ಮೈಸೂರು ದಸರಕ್ಕೂ, ಹಂಪಿ ಉತ್ಸವಕ್ಕೂ ಹೋಲಿಕೆ ಮಾಡುವಂತಿಲ್ಲ. ಮೈಸೂರು ದಸರಾ ನವರಾತ್ರಿ ವೇಳೆ ಆಚರಿಸಲಾಗುವ ಉತ್ಸವ. ಅದನ್ನು ಅದೇ ಕಾಲಕ್ಕೆ ಆಚರಿಸಬೇಕಾಗುತ್ತದೆ. ಹಂಪಿ ಉತ್ಸವವನ್ನು ಸಹ ಮುಂದಿನ ದಿನಗಳಲ್ಲಿ ದಸರಾ ದಿನಗಳಲ್ಲಿ ಅಥವಾ ನಿರ್ದಿಷ್ಟ ದಿನಗಳಲ್ಲಿ ಆಚರಿಸುವ ಬಗ್ಗೆ ಯೋಚಿಸಲಾಗುವುದು’ ಎಂದು ಶಾಸಕ ಗವಿಯಪ್ಪ ಹೇಳಿದರು.

ಇದಕ್ಕೆ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಅವರು ಧ್ವಜಾರೋಹಣ ನೆರವೇರಿಸಿ, ಜಿಲ್ಲೆಯನ್ನುದ್ದೇಶಿಸಿ ಮಾತನಾಡಿದರು. ಕ್ರೀಡಾಂಗಣದ ಮಧ್ಯಭಾಗದಲ್ಲಿರುವ ದೇಶದ ಅತ್ಯಂತ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT