ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿ.ವಿ: ಅಗತ್ಯ ₹5 ಕೋಟಿ, ಅನುದಾನ ₹1.5 ಕೋಟಿ ಮಾತ್ರ

Published 17 ಜೂನ್ 2023, 14:31 IST
Last Updated 17 ಜೂನ್ 2023, 14:31 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ ಜಿಲ್ಲೆ): ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ.

‘ವಿಶ್ವವಿದ್ಯಾಲಯಕ್ಕೆ ಕನಿಷ್ಠ ₹5 ಕೋಟಿಯ ವಾರ್ಷಿಕ ಅನುದಾನ ಬೇಕು, ಸದ್ಯ ₹1.5 ಕೋಟಿ ಅನುದಾನ ಮಾತ್ರ ಸಿಗುತ್ತಿದೆ. ಎರಡು ವರ್ಷದ ಹಿಂದೆ ₹ 50 ಲಕ್ಷ ಮಾತ್ರ ಅನುದಾನ ಸಿಕ್ಕಿತ್ತು. ಹಾಗಾಗಿ, ಅಗತ್ಯದ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ₹ 85 ಲಕ್ಷ ವಿದ್ಯುತ್‌ ಬಿಲ್ ಪಾವತಿಸದೆ, ಬಾಕಿ ಉಳಿದಿದೆ. ಹಳೆಯ ವಿದ್ಯುತ್ ಬಿಲ್ ಪಾವತಿ ಸಾಧ್ಯವಾಗಿಲ್ಲ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ವಿದ್ಯುತ್ ಸಂಪರ್ಕ ಕಡಿತ ಮಾಡಬಾರದು ಎಂಬ ಕಾರಣಕ್ಕೆ ಮೂರು ತಿಂಗಳಿನಿಂದ ಆಯಾ ತಿಂಗಳಿನ ಬಿಲ್‌  (ತಿಂಗಳಿಗೆ ಸುಮಾರು ₹ 10 ಲಕ್ಷ ಬರುತ್ತದೆ) ಹೊಂದಿಸಿಕೊಂಡು ಪಾವತಿಸಲಾಗುತ್ತಿದೆ’ ಎಂದರು.

‘ವಿದ್ಯುತ್ ಬಿಲ್ ಬಾಕಿ ಮನ್ನಾ ಮಾಡುವಂತೆ ಇಲ್ಲವೇ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೆ.ವಿ. ಸ್ಟೇಷನ್‌ ನಿರ್ಮಾಣಕ್ಕಾಗಿ ವಿಶ್ವವಿದ್ಯಾಲಯವು ಜೆಸ್ಕಾಂಗೆ ಅರ್ಧ ಎಕರೆ ಜಮೀನನ್ನು ಯಾವುದೇ ಷರತ್ತು ಇಲ್ಲದೆ ನೀಡಿದೆ. ಈ ಕಾರಣಕ್ಕಾದರೂ ಜೆಸ್ಕಾಂ ಬಾಕಿ ಬಿಲ್‌ ಮನ್ನಾ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT