ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: 26ರಿಂದ ಉಚಿತ ಜೈಪುರ್‌ ಕೃತಕ ಕಾಲು ಜೋಡಣೆ ಶಿಬಿರ

Published 21 ಜುಲೈ 2023, 14:17 IST
Last Updated 21 ಜುಲೈ 2023, 14:17 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಎಂಎಸ್‌ಪಿಎಲ್‌ ಕಂಪನಿಯು ಜೈಪುರದ ಭಗವಾನ್‌ ಮಹಾವೀರ ಅಂಗವಿಕಲರ ಸಹಕಾರ ಸಮಿತಿಯ ಸಹಯೋಗದಲ್ಲಿ 10ನೇ ವರ್ಷದ ಉಚಿತ ಜೈಪುರ್‌ ಕೃತಕ ಕಾಲು ಜೋಡಣೆ ಶಿಬಿರವನ್ನು ಇದೇ 26ರಿಂದ 28ರವರೆಗೆ ಇಲ್ಲಿನ ಸಂಡೂರು ರಸ್ತೆಯ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದೆ.

‘ಒಂಭತ್ತು ಬಾರಿ ಆಯೋಜಿಸಲಾಗಿದ್ದ ಶಿಬಿರದಲ್ಲಿ 2,171ಕ್ಕೂ ಹೆಚ್ಚು ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. 1,006 ಜನರಿಗೆ ಕೃತಕ ಕಾಲು, 681 ಕ್ಯಾಲಿಪರ್ಸ್, 44 ವಾಕರ್‌, 71 ಕೈಗೋಲು, 245 ಊರುಗೋಲು, 38 ಗಾಲಿ ಕುರ್ಚಿ, 38 ಕೈಚಾಲಿತ ಸೈಕಲ್‌ ನೀಡಲಾಗಿದೆ ಹಾಗೂ 48 ಮಂದಿ ಲಘು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ‘ ಎಂದು ಕಂಪನಿಯ ಸಮಾಜ ಸೇವಾ ಕಾರ್ಯಕ್ರಮಗಳ ಮುಖ್ಯಸ್ಥ ರಮೇಶ್‌ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಜನರಿಗೆ ಅನುಕೂಲವಾಗಲೆಂದು ಹೊಸಪೇಟೆಯಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಗದಗ, ಬಾಗಲಕೋಟೆ, ರಾಯಚೂರುಗಳಿಂದಲೂ ಈ ಶಿಬಿರದ ಪ್ರಯೋಜನ ಪಡೆದವರಿದ್ದಾರೆ. ಹುಟ್ಟಿನಿಂದ ಕಾಲಿನ ಅಂಗವಿಕಲತೆ ಇದ್ದವರು, ಪೋಲಿಯೊ ಪೀಡಿತರು, ಆಕಸ್ಮಿಕ ಅಪಘಾತಗಳಿಂದ ಕಾಲು ಕಳೆದುಕೊಂಡವರು, ಮಧುಮೇಹದಿಂದ ಕಾಲು ಕಳೆದುಕೊಂಡವರ ಸಹಿತ ಯಾವುದೇ ರೀತಿಯ ಕಾಲಿನ ಅಂಗವಿಕಲತೆ ಹೊಂದಿರುವವರು ಈ ಶಿಬಿರದ ಪ್ರಯೋಜನ ಪಡೆಯಬಹುದು ಎಂದು ಅವರು ಮಾಹಿತಿ ನೀಡಿದರು.

ಸ್ಥಳದಲ್ಲೇ ಅಳತೆ ತೆಗೆದು ಕೃತಕ  ಕಾಲು ಸಿದ್ಧಪಡಿಸಿಕೊಡಲಾಗುತ್ತದೆ. ಒಬ್ಬ ವ್ಯಕ್ತಿಗೆ ಸರಾಸರಿ ₹5 ಸಾವಿರ ವೆಚ್ಚ ತಗುಲುತ್ತದೆ. ಈ ಬಾರಿ 250ರಷ್ಟು ಮಂದಿ ಶಿಬಿರದ ಪ್ರಯೋಜನೆ ಪಡೆಯುವ ನಿರೀಕ್ಷೆ ಇದೆ. ದೂರದಿಂದ ಬಂದವರಿಗೆ ಅವರ ಸಹಾಯಕರ ಸಹಿತ ಊಟ, ವಸತಿಯ ವ್ಯವಸ್ಥೆ ಇದೆ ಎಂದರು. ಕಂಪನಿಯ ನಾಗರಾಜ್‌, ಕೃಷ್ಣ ಇದ್ದರು.

ಹೆಸರು ನೋಂದಾಯಿಸಲು 9902500250 (ಬಿ.ಎಂ.ನಾಗರಾಜ್‌), 9449135837 (ಎಸ್.ಎಂ.ಶಂಭುಲಿಂಗಯ್ಯ) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT