ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಜಲಾಶಯಕ್ಕೆ ಒಳ ಹರಿವು ಆರಂಭ

Published 2 ಜೂನ್ 2024, 15:30 IST
Last Updated 2 ಜೂನ್ 2024, 15:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಸುಮಾರು ನಾಲ್ಕು ತಿಂಗಳಿನಿಂದ ಒಳಹರಿವು ಬಂದ್‌ ಆಗಿದ್ದ ತುಂಗಭದ್ರಾ ಜಲಾಶಯಕ್ಕೆ ಶನಿವಾರ 360 ಕ್ಯೂಸೆಕ್‌ ನೀರು ಹರಿದುಬಂದಿದೆ. ಭಾನುವಾರ ಕೂಡ 385 ಕ್ಯೂಸೆಕ್‌ ನೀರು ಬಂದಿದ್ದು ಸಂತಸ ಮೂಡಿಸಿದೆ.

ಶಿವಮೊಗ್ಗ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಆಗಿರುವುದರಿಂದ ಹಾಗೂ ತುಂಗಭದ್ರಾ ಜಲಾನಯನ ಪ್ರದೇಶಗಳಲ್ಲಿ ಸಹ ಸಾಧಾರಣ ಮಳೆ ಆಗಿರುವ ಕಾರಣ ಸಿಂಗಾಟಾಲೂರು ಬ್ಯಾರೇಜ್‌ನಿಂದ ಎರಡು ದಿನಗಳ ಹಿಂದೆ ಎರಡು ಕ್ರಸ್ಟ್‌ ಗೇಟ್‌ಗಳಿಂದ ನೀರು ಬಿಡುಗಡೆ ಮಾಡಲಾಗಿತ್ತು. ಅದು ಇದೀಗ ತುಂಗಭದ್ರಾ ಜಲಾಶಯ ಸೇರಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT