ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಯಲ್ಲಿ ಮರುಕಳಿಸಿದ ಜನಪದ ವೈಭವ‌‌‌‌‌‌‌‌‌‌‌

ಮುತ್ತು, ರತ್ನ ಅಳೆದಿದ್ದ ನೆಲದಲ್ಲಿ ಮಾಯಾಲೋಕ ಸೃಷ್ಟಿಸಿದ ಕಲಾವಿದರು
Published 3 ನವೆಂಬರ್ 2023, 4:08 IST
Last Updated 3 ನವೆಂಬರ್ 2023, 4:08 IST
ಅಕ್ಷರ ಗಾತ್ರ

ಹಂಪಿ: ಆಗ ತಾನೆ ಸೂರ್ಯ ಮುಳಗಲು ಅಣಿಯಾಗಿದ್ದ, ಆಗ ಹಂಪಿ ವಿರೂಪಾಕ್ಷನ ದೇಗುಲದ ಎದುರಿನಲ್ಲಿ ಜಾನಪದ ಲೋಕವೇ ಇಳಿಯಿತು..

ಸ್ಥಳೀಯ ಕಲಾತಂಡಗಳು ಮುಳುಗು ಸೂರ್ಯನ ಕೆಂಪಾದ ಕಿರಣಗಳು ಮತ್ತೆ ಮರುಪೂರಣದ ಪ್ರಜ್ವಲದ ಬೆಳಕು ನೀಡುವಂತೆ ತಮ್ಮ ಕಲಾ ಹಿರಿಮೆಯನ್ನು ಪ್ರದರ್ಶಿಸಿದವು. ರಾಮಸಾಗರದ ಐವತ್ತಕ್ಕೂ ಹೆಚ್ಚು ಕಲಾವಿದರು ನುಡಿಸಿದ ಕಹಳೆ ವಾದನವಂತೂ ವಿಜಯನಗರ ಸಾಮ್ರಾಜ್ಯದ ಆಡಳಿತವನ್ನು ಪುನರ್ ನಿರ್ಮಿಸುವುದನ್ನು ಅಧಿಕೃತವಾಗಿ ಸ್ವಾಗತ ಮಾಡುವಂತ್ತಿತ್ತು.

ಇದು ಕರ್ನಾಟಕ ಸಂಭ್ರಮ-50 ಕಾರ್ಯಕ್ರಮದ ಗುರುವಾರ ಜಾನಪದ ಕಲಾತಂಡಗಳ ಮೆರುಗು, ಹಂಪಿ ವಿರೂಪಾಕ್ಷನ ರಥಬೀದಿಯಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಮಹಿಳೆಯರು ಕೆಂಪು ರವಿಕೆ, ಹಳದಿ ಸೀರೆ ಧರಸಿ ಕನ್ನಡ ಧ್ವಜದಂತೆ ಉಡುಗೆ ಮೂಲಕ ಪೂರ್ಣಕುಂಭಗಳೊಂದಿಗೆ ನಾಡದೊರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿದರು. ವಿರೂಪಾಕ್ಷೇಶ್ವರ ದೇವಸ್ಥಾನದ ಗಜರಾಜ ತನ್ನ ಎಂದಿನ ಶೈಲಿಯಲ್ಲಿ ರಾಜಗಾಂಭೀರ್ಯತೆಯ ಮೂಲಕ ದೇವರಸ್ಥಾನದ ಮುಖ್ಯ ದ್ವಾರದಲ್ಲಿ ಸ್ವಾಗತ ಮಾಡಿದ.

ಕೂಡ್ಲಿಗಿ ತಾಲ್ಲೂಕಿನ ಇಮಡಾಪುರದ ಮಹಿಳೆಯರು ಉರುಮೆ ವಾದನ, ಡೊಳ್ಳುವಾದನ, ನಂದಿಬೇವೂರಿನ ಸಮಾಳ, ಹೊಸಪೇಟೆಯ ಸೋಮಲಾಪುರದ ಮರಗಾಲು ಕುಣಿತ, ಬಸವನ ದುರ್ಗದ ಕೋಲಾಟ, ಕಂಪ್ಲಿಯ ತಾಷಾರದಂಡೋಲ, ಹೊಸಪೇಟೆ ಬಾಲಕಿಯರ ಯಕ್ಷಗಾನ, ಸುಡುಗಾಡ ಸಿದ್ದರು, ಗೊಂದಳಿ ಕಲೆಯನ್ನು ಪ್ರದರ್ಶಿಸಿ ಗಮನ ಸೆಳೆದರು.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ಕಲಾವಿದರು ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಹಂಪಿಯ ರಂಜು ಯೋಗ ಆರ್ಟ್ಸ್‌ನ ತಂಡದ ಬಾಲಕ ಮತ್ತು ಬಾಲಕಿಯರು ಮುಖದ ಮೇಲೆ ಚಿತ್ರಸಿಕೊಂಡಿದ್ದ ಕರ್ನಾಟಕದ ನಕ್ಷೆ ಗಮನ ಸೆಳೆಯಿತು. ವಿದೇಶಿ ಪ್ರವಾಸಿಗರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ ಅನೇಕ ಪ್ರವಾಸಿಗರು ಮೆರವಣಿಗೆ ವೀಕ್ಷಿಸುವಲ್ಲಿ ತಲ್ಲೀನರಾಗಿದ್ದರು. ಡೊಳ್ಳು, ಸಮಾಳ, ತಾಷಾರದಾಂಡೋಲ ನಿನಾದಕ್ಕೆ ಹೆಜ್ಜೆ ಹಾಕಿದರು.

ದೇವಸ್ಥಾನದಿಂದ ಎದುರು ಬಸವಣ್ಣ ಮಂಟಪದ ಸನಿಹದ ಮುಕ್ಕಾಲು ಕಿಲೋ ಮೀಟರ್ ದೂರದಷ್ಟು ಸಾಗಿಬಂದ ಮೆರವಣಿಗೆಯ ಎರಡೂ ಬದಿಯಲ್ಲಿ ಶಿಲಾ ಮಂಟಪಗಳನ್ನು ಕನ್ನಡ ಧ್ವಜಗಳಿಂದ ಅಲಂಕರಿಸಿದ್ದು ಶಿಲೆಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿತು.

ಹಂಪಿಯಲ್ಲಿ ಗುರುವಾರ ಸಂಜೆ ಭವ್ಯ ಜಾನಪದ ಮೆರವಣಿಗೆ ನೋಡುಗರ ಗಮನ ಸೆಳೆಯಿತು  –ಪ್ರಜಾವಾಣಿ ಚಿತ್ರ/ ಲವ ಕೆ.
ಹಂಪಿಯಲ್ಲಿ ಗುರುವಾರ ಸಂಜೆ ಭವ್ಯ ಜಾನಪದ ಮೆರವಣಿಗೆ ನೋಡುಗರ ಗಮನ ಸೆಳೆಯಿತು  –ಪ್ರಜಾವಾಣಿ ಚಿತ್ರ/ ಲವ ಕೆ.

ಈಗ ತಾನೆ ಸೂರ್ಯ ಮುಳಗಲು ಅಣಿಯಾಗಿದ್ದ ಆಗ ಹಂಪಿ ವಿರೂಪಾಕ್ಷನ ದೇಗುಲದ ಎದುರಿನಲ್ಲಿ ಜಾನಪದ ಲೋಕವೇ ಇಳಿಯಿತು.. ಸ್ಥಳೀಯ ಕಲಾತಂಡಗಳು ಮುಳುಗು ಸೂರ್ಯನ ಕೆಂಪಾದ ಕಿರಣಗಳು ಮತ್ತೆ ಮರುಪೂರಣದ ಪ್ರಜ್ವಲನದ ಬೆಳಕು ನೀಡುವಂತೆ ತಮ್ಮ ಕಲಾ ಹಿರಿಮೆಯನ್ನು ಪ್ರದರ್ಶಿಸಿದವು. ರಾಮಸಾಗರದ ಐವತ್ತಕ್ಕೂ ಹೆಚ್ಚು ಕಲಾವಿದರು ನುಡಿಸಿದ ಕಹಳೆ ವಾದನವಂತೂ ವಿಜಯನಗರ ಸಾಮ್ರಾಜ್ಯದ ಆಡಳಿತವನ್ನು ಪುನರ್ ನಿರ್ಮಿಸುವುದನ್ನು ಅಧಿಕೃತವಾಗಿ ಸ್ವಾಗತ ಮಾಡುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT