ಕೊಟ್ಟೂರು (ವಿಜಯನಗರ ಜಿಲ್ಲೆ): ಪಟ್ಟಣದ ಲಾಲ್ ಬಹಾದ್ದೂರ್ ಶಾಸ್ತ್ರಿ ಬಡಾವಣೆಯ ಮನೆಯೊಂದರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ತಿಲಕ್ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಇಬ್ಬರ ಹೆಸರು ಉಲ್ಲೇಖ ಇದೆ ಎಂದು ವಿಜಯನಗರ ಎಸ್ಪಿ ಎಸ್.ಜಾಹ್ನವಿ ಹೇಳಿದ್ದಾರೆ.
.ಕೊಟ್ಟೂರು: ಮನೆಯೊಳಗೆ ತೋಡಿದ್ದ ಗುಂಡಿಯಲ್ಲಿ ಮೂರೂ ಮೃತದೇಹ ಪತ್ತೆ.
ಕೊಟ್ಟೂರಿನ ಮನೆಯಲ್ಲಿ ಹೂತಿಟ್ಟಿದ್ದ ಮೂರು ಶವಗಳನ್ನು ಶನಿವಾರ ತಿಲಕ್ನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಸಮ್ಮುಖದಲ್ಲಿ ಹೊರತೆಗೆದ ಬಳಿಕ ಹಾಗೂ ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಬಳಿಕ ಎಸ್ಪಿ ಅವರು ಮಾಧ್ಯಮದವರಿಗೆ ಈ ಮಾಹಿತಿ ನೀಡಿದರು.

‘ಅರೋಪಿ ಅಕ್ಷಯ್ ಕುಮಾರ್ ತನ್ನ ತಂದೆ, ತಾಯಿ,ತಂಗಿ ನಾಪತ್ತೆಯಾಗಿದ್ದಾರೆ ಎಂದು ಮೊದಲಿಗೆ ದೂರು ನೀಡಿದ್ದ. ಆದರೆ ಆತನ ವರ್ತನೆಯಲ್ಲಿ ಸಂಶಯ ಬಂದ ಮೇರೆಗೆ ತಿಲಕ್ನಗರ ಪೊಲೀಸರು ವಿಚಾರಣೆ ನಡೆಸಿದಾಗ ಅವರ ಕೊಲೆ ಆಗಿರುವುದನ್ನು ತಿಳಿಸಿದ್ದ. ಹೀಗಾಗಿ ಶುಕ್ರವಾರ ತಿಲಕ್ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆತನನ್ನು ಶನಿವಾರ ಇಲ್ಲಿಗೆ ಕರೆತಂದು ಮಹಜರು ನಡೆಸಿ ಹೂತಿಟ್ಟ ಶವ ಹೊರತೆಗೆಯಲಾಗಿದೆ. ಸದ್ಯ ತಿಲಕ್ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರು ಪ್ರಕರಣವನ್ನು ಹಸ್ತಾಂತರಿಸಿದ ಬಳಿಕ ನಮ್ಮ ವಿಚಾರಣೆ ಇಲ್ಲಿ ಆರಂಭವಾಗಲಿದೆ’ ಎಂದು ಎಸ್ಪಿ ಹೇಳಿದರು.

‘ಕೊಲೆ ಯಾವಾಗ ನಡೆದಿದೆ, ಹೇಗೆ ನಡೆದಿದೆ, ಕೊಲೆಯ ಉದ್ದೇಶ, ಹಿನ್ನೆಲೆ ಇನ್ನೂ ಗೊತ್ತಾಗಿಲ್ಲ, ಅದರ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದಷ್ಟೇ ಅವರು ತಿಳಿಸಿದರು.
.ವಿಜಯನಗರ: ಮೂವರು ನಾಪತ್ತೆ, ಕೊಲೆ ಶಂಕೆ; ಬೆಚ್ಚಿಬಿದ್ದ ಕೊಟ್ಟೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.