ಪ್ರತಿ ಶುಕ್ರವಾರ ಗ್ರಾಮದ ಚಿಕ್ಕಕೆರೆ ದಡದಲ್ಲಿ ದುರ್ವಾಸನೆಯಲ್ಲಿಯೇ ಸಂತೆ ನಡೆಯುತ್ತದೆ. ಕೆರೆ ಸಮೀಪವೇ ಪೊಲೀಸ್ ವಸತಿ ಗೃಹಗಳಿವೆ. ಸುತ್ತಮುತ್ತಲಿನ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ
ಹಾದಿಮನಿ ಸಂತೋಷ ಅರಸೀಕೆರೆ
ಹರಪನಹಳ್ಳಿ ಹಿರೆಕೆರೆ ಐಯ್ಯನಕೆರೆಗೆ ಅಪಾಯಕಾರಿ ಘನತ್ಯಾಜ್ಯ ಬಂದು ಸೇರುತ್ತಿದೆ. ಹಿಂದೆ ದನಕರುಗಳಿಗೆ ಕುಡಿಯಲು ಬಳಕೆಗೆ ಯೋಗ್ಯವಾಗಿದ್ದ ಕೆರೆಗಳ ನೀರು ಈಗ ಸಂಪೂರ್ಣ ಕಲುಷಿತಗೊಂಡಿದೆ. ಸರ್ಕಾರ ಕೆರೆಗಳ ಅಭಿವೃದ್ದಿಗೆ ಕಾಳಜಿವಹಿಸಬೇಕು
ಬೂದಿ ನವೀನ್ ಮಾಜಿ ಸದಸ್ಯರು ಪುರಸಭೆ
ನಗರದ ಹಿರೆಕೆರೆ ಐಯ್ಯನಕೆರೆಗಳ ರಕ್ಷಣೆಗೆ ಡಿಪಿಆರ್ ತಯಾರು ಹಂತದಲ್ಲಿದೆ. ಈಗಾಗಲೇ ಕೆರೆ ಸ್ವಚ್ಚತೆ ಪೌರ ಕಾರ್ಮಿಕರು ನಿರ್ವಹಿಸುತ್ತಿದ್ದಾರೆ. ಕೆರೆಗಳನ್ನು ಪುರಸಭೆ ಸುಪರ್ದಿಗೆ ಕೊಟ್ಟ ಬಳಿಕ ರಕ್ಷಣೆಗೆ ಕ್ರಮ ವಹಿಸುತ್ತೇವೆ