ಭಾನುವಾರ, ಜುಲೈ 3, 2022
24 °C

ರಜೆ; ಬ್ಯಾಂಕ್‌ನಲ್ಲಿ ಜನದಟ್ಟಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ(ವಿಜಯನಗರ): ಬುಧವಾರದಿಂದ (ಜೂ. 2) ಜಾರಿಗೆ ಬರುವಂತೆ ಜಿಲ್ಲೆಯಲ್ಲಿ ನಾಲ್ಕು ದಿನ ಬ್ಯಾಂಕುಗಳು ಮುಚ್ಚಿರುವುದರಿಂದ ಮಂಗಳವಾರ ನಗರದ ವಿವಿಧ ಬ್ಯಾಂಕುಗಳಲ್ಲಿ ಜನದಟ್ಟಣೆ ಕಂಡು ಬಂತು.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ಜಿಲ್ಲಾಡಳಿತ ಜನರ ಓಡಾಟ ನಿಯಂತ್ರಿಸಲು ಮುಂದಾಗಿದೆ. ಅದರ ಭಾಗವಾಗಿ ಎಲ್ಲ ಬ್ಯಾಂಕುಗಳನ್ನು ನಾಲ್ಕು ದಿನ ಮುಚ್ಚಲು ಸೋಮವಾರ ಆದೇಶ ಹೊರಡಿಸಿತು. ಈ ವಿಷಯ ತಿಳಿದು ಮಂಗಳವಾರ ಬೆಳಿಗ್ಗೆಯೇ ಜನ ವಿವಿಧ ಬ್ಯಾಂಕುಗಳಿಗೆ ಬಂದಿದ್ದರು.

ಬಿಸಿಲು ಏರುತ್ತಿದ್ದಂತೆ ಉದ್ದನೆಯ ಸಾಲಿನಲ್ಲಿ ಜನ ಹಣ ಬಿಡಿಸಿಕೊಳ್ಳಲು ನಿಂತಿದ್ದರು. ರಾಷ್ಟ್ರೀಕೃತ, ವಾಣಿಜ್ಯ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಎದುರು ಗ್ರಾಹಕರ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂತರ ಕಾಯ್ದುಕೊಳ್ಳದೆ ಜನ ನಿಂತಿರುವುದು ಕಂಡು ಬಂತು. ಎಟಿಎಂಗಳಿಂದ ಎಂದಿನಂತೆ ಜನ ಹಣ ಬಿಡಿಸಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು