ಸೋಮವಾರ, ಜುಲೈ 4, 2022
24 °C

ಕಬ್ಬು ನುರಿವ ಯಂತ್ರಕ್ಕೆ ಸಿಲುಕಿ ಬೇರ್ಪಟ್ಟ ವ್ಯಕ್ತಿಯ ರುಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಗಾಣದ ಕಬ್ಬು ನುರಿಯುವ ಯಂತ್ರಕ್ಕೆ ಸಿಲುಕಿ ವ್ಯಕ್ತಿಯ ರುಂಡ ಬೇರ್ಪಟ್ಟ ಘಟನೆ ತಾಲ್ಲೂಕಿನ ನಾಗೇನಹಳ್ಳಿ ಸಮೀಪ ಶುಕ್ರವಾರ ನಡೆದಿದೆ.

ಉತ್ತರ ಪ್ರದೇಶದ ಸುಶೀಲ್‌ (40) ಮೃತ ವ್ಯಕ್ತಿ. ‘ನಾಗೇನಹಳ್ಳಿ ಸಮೀಪದ ಕಬ್ಬಿನ ಗಾಣದ ಮನೆಯಲ್ಲಿ ಕಬ್ಬು ನುರಿಯುವ ಯಂತ್ರಕ್ಕೆ ಸುಶೀಲ್‌ ಗ್ರೀಸ್‌ ಹಚ್ಚುತ್ತಿದ್ದ ವೇಳೆ ಅದರೊಳಗೆ ಸಿಲುಕಿಕೊಂಡಿದ್ದಾನೆ. ಯಂತ್ರ ವೇಗವಾಗಿ ತಿರುಗುತ್ತಿದ್ದರಿಂದ  ರುಂಡ ಬೇರ್ಪಟ್ಟಿದೆ. ರುಂಡ ಒಂದು ಕಡೆ, ದೇಹ ಒಂದು ಕಡೆ ಬಿದ್ದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದು ಗ್ರಾಮಸ್ಥರು ಸ್ಥಳದಲ್ಲಿ ಸೇರಿದ್ದರು. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು