ಜಿಲ್ಲೆಗೆ ದೊರೆತ ಯೋಜನೆಗಳು 64
ಕೆಎಂಇಆರ್‌ಸಿಯ ಮೇಲುಸ್ತುವಾರಿ ಪ್ರಾಧಿಕಾರದಿಂದ 2022ರ ಜೂನ್ 18ರಿಂದ 2025ರ ಏಪ್ರಿಲ್ 3ರವರೆಗೆ ಒಟ್ಟು 19 ಸಭೆಗಳು ನಡೆದಿದ್ದು ನಾಲ್ಕು ಗಣಿಬಾಧಿತ ಜಿಲ್ಲೆಗಳಾದ ಬಳ್ಳಾರಿ ವಿಜಯನಗರ ಚಿತ್ರದುರ್ಗ ಮತ್ತು ತುಮಕೂರುಗಳ 455 ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಈ ಪೈಕಿ ವಿಜಯನಗರ ಜಿಲ್ಲೆಗೆ ಸಂಬಂಧಿಸಿದ 64 ಯೋಜನೆಗಳಿಗೆ ಒಪ್ಪಿಗೆ ದೊರೆತಿದೆ ಇದರಲ್ಲಿ ₹33.23 ಕೋಟಿ ವೆಚ್ಚದ ಪಿ.ಕೆ.ಹಳ್ಳಿ ವ್ಯಾಪ್ತಿಯ ಐದು ಕ್ಯಾಂಪ್‌ಗಳ 470 ಮನೆ ನಿರ್ಮಾಣ ಯೋಜನೆಯೂ ಒಂದು ಎಂಬ ಮಾಹಿತಿ ಕೆಎಂಇಆರ್‌ಸಿ ವೆಬ್‌ಸೈಟ್‌ನಲ್ಲಿದೆ.