ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಚಿವ ಸಂತೋಷ್‌ ಲಾಡ್ ಹುಟ್ಟುಹಬ್ಬ: ವಿಜಯ ಪ್ರಕಾಶ್‌, ಸಲ್ಮಾನ್ ಅಲಿ ಗಾಯನ

Published 23 ಫೆಬ್ರುವರಿ 2024, 15:15 IST
Last Updated 23 ಫೆಬ್ರುವರಿ 2024, 15:15 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಬುದ್ಧ, ಬಸವ ತತ್ವದ ಅನುಯಾಯಿಯೂ ಆಗಿರುವ ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಂತೋಷ್‌ ಲಾಡ್ ಫೌಂಡೇಶನ್ ವತಿಯಿಂದ ಕಾಯಕಯೋಗಿ ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಕುರಿತ ಗೀತೆಗಳ ಬಿಡುಗಡೆ ಸಮಾರಂಭ ಫೆ.27ರಂದು ನಗರದಲ್ಲಿ ನಡೆಯಲಿದೆ.

‘ನಗರದ ಪುನೀತ್‌ ರಾಜ್‌ಕುಮಾರ್ ಮೈದಾನದಲ್ಲಿ ಅಂದು ಸಂಜೆ 4ರ ಬಳಿಕ ‘ಅಭಿಮಾನ ಸಮರ್ಪಣೆ’ ಕಾರ್ಯಕ್ರಮ ನಡೆಯಲಿದೆ. ಚಲನಚಿತ್ರ ಸಾಹಿತಿ ವಿ.ನಾಗೇಂದ್ರ ಪ್ರಸಾದ್‌ ರಚನೆಯ ಈ ಗೀತೆಗಳ ಬಿಡುಗಡೆ ಸಮಾರಂಭದಲ್ಲಿ ಪ್ರಖ್ಯಾತ ಗಾಯಕರಾದ ವಿಜಯ ಪ್ರಕಾಶ್‌, ಸಲ್ಮಾನ್‌ ಅಲಿ ಅವರು ಪಾಲ್ಗೊಂಡು ಗಾಯನ ಪ್ರಸ್ತುತಪಡಿಸಲಿದ್ದಾರೆ’ ಎಂದು ಫೌಂಡೇಶನ್‌ನ ಸಂಚಾಲಕರಾದ ಕವಿತಾ ರೆಡ್ಡಿ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬಸವಣ್ಣ, ಅಂಬೇಡ್ಕರ್ ಕುರಿತಂತೆ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಹ ಒಂದಿಷ್ಟು ಕೆಲಸ ಮಾಡಬೇಕು ಎಂಬ ನೆಲೆಯಲ್ಲಿ ಈ ಪ್ರಯತ್ನ ನಡೆದಿದೆ. 25 ಗೀತೆಗಳನ್ನು ರಚಿಸಿ ಬಿಡುಗಡೆ ಮಾಡುವ ಗುರಿ ಇದ್ದು, ಸದ್ಯ 10 ಗೀತೆಗಳನ್ನು ಬಿಡುಗಡೆ ಮಾಡಲಾಗುವುದು. ಅತ್ಯುತ್ತಮವಾಗಿ ರೀಲ್‌ ಮಾಡುವ ಮಕ್ಕಳಿಗೆ ಬಹುಮಾನವನ್ನೂ ಇಡಲಾಗಿದೆ’ ಎಂದರು.

ಬಸವತತ್ವ ಬಳಗದ ಮಾವಿನಹಳ್ಳಿ ಬಸವರಾಜ್‌, ಡಾ.ನಂದೀಶ್ವರ, ವಸುಕಿರಣ್, ನಿಂಬಗಲ್ ರಾಮಕೃಷ್ಣ ಅವರು ಪೂರಕ ಮಾಹಿತಿ ನೀಡಿದರು. ನಾಗೇಶ್‌ ಪಾಟೀಲ್‌, ಶಿವಕುಮಾರ್, ಬಸವರಾಜಪ‍್ಪ, ಗುಜ್ಜಲ್‌ ಗಣೇಶ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT