ಹೊಸಪೇಟೆ (ವಿಜಯನಗರ): ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರ ವೈಯಕ್ತಿಕ ಆರ್ಥಿಕ ನೆರವಿನೊಂದಿಗೆ ರಾಜ್ಯದ 470 ಯಾತ್ರಿಗಳಿಗೆ ಉಮ್ರಾ ಭಾಗ್ಯ ದೊರೆತಿದ್ದು, ಜಿಲ್ಲೆಯ 15 ಮಂದಿಗೆ ಶನಿವಾರ ಇಲ್ಲಿ ಇಲ್ಲಿ ಬೀಳ್ಕೊಡಲಾಯಿತು.

ಇಲ್ಲಿನ ಅಂಜುಮನ್ ಶಾದಿಮಹಲ್ನಲ್ಲಿ ಅಂಜುಮನ್ ಕಮಿಟಿಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಅಧ್ಯಕ್ಷ ಹಾಗೂ ಕಮಿಟಿಯ ಅಧ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಸಚಿವರ ಮಾನವೀಯ ಕಾರ್ಯವನ್ನು ಶ್ಲಾಘಿಸಿ ಇಂದು ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇವೆ, ಸಚಿವರು ಈ ಮೂಲಕ ಮಹಾದಾನಿ ಎನಿಸಿದ್ದಾರೆ ಎಂದರು.

‘ರಾಜ್ಯದ ಅನೇಕ ಬಡ ಮುಸ್ಲಿಂರಿಗೆ ಹಣಕಾಸಿನ ಮುಗ್ಗಟ್ಟಿನಿಂದ ಉಮ್ರಾ ಯಾತ್ರೆ ಕನಸಿನ ಮಾತಾಗಿತ್ತು, ಅದರೆ ಸಚಿವರ ಈ ನಿಸ್ವಾರ್ಥ ಸೇವೆ ಮತ್ತು ಬಡವರ ಮೇಲಿನ ಕಾಳಜಿಯಿಂದ ಯಾತ್ರಿಗಳ ಕನಸು ನನಸಾಗಿದೆ. ಸಚಿವರು ಈಗಾಗಲೇ 1,959 ಮಂದಿಯನ್ನು ಉಮ್ರಾಗೆ ಕಳುಹಿಸಿಕೊಟ್ಟಿದ್ದಾರೆ’ ಎಂದರು.

ಯಾತ್ರಿಗಳು ಮಾತನಾಡಿ, ಮಕ್ಕಾ ಯಾತ್ರೆ ಕೈಗೊಳ್ಳಲು ನಮಗೆ ಸಹಾಯ ಮಾಡಿದ ಸಚಿವರ ಆರೋಗ್ಯ ಮತ್ತು ಲೋಕ ಕಲ್ಯಾಣಕ್ಕಾಗಿ ಮಕ್ಕಾದಲ್ಲಿ ಪ್ರಾರ್ಥಿಸುತ್ತೇವೆ ಎಂದು ಭಾವುಕರಾದರು.

ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಅನ್ಸರ್ ಬಾಷಾ, ಪೈರೋಜ್ ಖಾನ್, ಎಂ.ಡಿ.ಅಭುಬ್ ಖರ್, ಡಾ. ದರ್ವೇಶ, ಎಂ.ಡಿ. ಮೋಸಿನ್ ಕೊತ್ವಲ್, ಸದ್ದಾಂ ಹುಸೇನ್, ಸಮುದಾಯದ ಮುಖಂಡರಾಧ ಮುಷೀರ್ ಅಹಮದ್, ಗಫೂರ ಸಾಬ್, ಶೇಖ್ ಅಹಮ್ಮದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.