ಹೊಸಪೇಟೆ (ವಿಜಯನಗರ): ನೆಲದಡಿ ‘ಆಪ್ಟಿಕಲ್ ಫೈಬರ್ ಕೇಬಲ್’ (ಒಎಫ್ಸಿ) ಹಾಕಲು ಹಗರಿಬೊಮ್ಮನಹಳ್ಳಿ ಶಾಸಕ ಭೀಮ ನಾಯ್ಕ ಲಂಚ ಕೇಳಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಒಎಫ್ಸಿ ಕೇಬಲ್ ಹಾಕಲು ವ್ಯಕ್ತಿಯೊಬ್ಬರಿಗೆ ಶಾಸಕರು ಪ್ರತಿ ಕಿ.ಮೀಗೆ ₹2 ಲಕ್ಷ ಲಂಚ ಕೇಳುತ್ತಿರುವುದು ಮತ್ತು ನೋಟಿನ ಕಂತೆಗಳನ್ನು ಪಡೆದು, ಇನ್ನೊಬ್ಬರಿಗೆ ಹಸ್ತಾಂತರಿಸುವುದು ವಿಡಿಯೊದಲ್ಲಿದೆ. ಟಿ.ವಿ. ಚಾನೆಲ್ ನಡೆಸಿದ ಸ್ಟಿಂಗ್ ಆಪರೇಷನ್ ಇದಾಗಿದೆ ಎಂದು ಗೊತ್ತಾಗಿದೆ.

‘ಬೆಂಗಳೂರಿನಲ್ಲೆ ಒಂದುವರೆ ಲಕ್ಷ ಮಾಡ್ತಾರೆ. ಇಲ್ಲಿ ಎರಡು ಲಕ್ಷ ಜಾಸ್ತಿ ಆಯ್ತು. ಸ್ವಲ್ಪ ಕಡಿಮೆ ಮಾಡಿ ಅಣ್ಣ’ ಎಂದು ವ್ಯಕ್ತಿಯೊಬ್ಬರು ಹೇಳುತ್ತಾರೆ. ‘ಏಯ್ ಇಲ್ಲಪ್ಪ, ಎರಡೆರಡು ಮಾಡು. ಏಯ್ ಒಂದು ಲಕ್ಷ ಆಗಲ್ಲ ಹೋಗಪ್ಪ’ ಎಂದು ಭೀಮ ನಾಯ್ಕ ಹೇಳುತ್ತಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದು, ಇದನ್ನೇ ಮುಂದಿಟ್ಟುಕೊಂಡು ಅವರ ವಿರೋಧಿಗಳು ಅವರನ್ನು ಟೀಕಿಸುತ್ತಿದ್ದಾರೆ. ಈ ಬಗ್ಗೆ ಶಾಸಕರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.