ಹೊಸಪೇಟೆ (ವಿಜಯನಗರ): ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆ ಸೋಮವಾರ ನಡೆಯಲಿದ್ದು, ಮತದಾನ ಕೇಂದ್ರಗಳಿಗೆ ಚುನಾವಣಾ ಸಾಮಗ್ರಿಗಳನ್ನು ಕಳುಹಿಸುವ ಮಸ್ಟರಿಂಗ್ ಕಾರ್ಯವು ಭಾನುವಾರ ಜಿಲ್ಲೆಯ ವಿವಿಧೆಡೆ ವ್ಯವಸ್ಥಿತವಾಗಿ ನಡೆಯಿತು.

ಮಸ್ಟರಿಂಗ್ ಕೇಂದ್ರದಲ್ಲಿ ಹಾಜರಿದ್ದ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ, ಮತದಾನಕ್ಕೆ ಅವಶ್ಯವಿರುವ ಸಾಮಗ್ರಿಗಳನ್ನು ಪಡೆದುಕೊಂಡು ತಮ್ಮ ಮತಗಟ್ಟೆಗಳಿಗೆ ತೆರಳಿದರು.

ಜಿಲ್ಲೆಯ 6 ತಾಲ್ಲೂಕಿನ 21 ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ನಡೆಯಲಿದ್ದು, ಮಹಿಳಾ ಮತದಾರರು 6,336, ಪುರುಷ ಮತದಾರರು 11,895 ಮತ್ತು ಇತರೆ ಇಬ್ಬರು ಇದ್ದಾರೆ.

ಮತಗಟ್ಟೆಗಳ ವಿವರ:

ಹೂವಿನಹಡಗಲಿ: ಜಿ.ಪಿ.ಜಿ. ಸರ್ಕಾರಿ ಪದವಿ ಪೂರ್ವ ಕಾಲೇಜು ರೂಂ.ನಂ.1, 2, ಇಟ್ಟಿಗಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹಿರೇಹಡಗಲಿಯ ವೀರಪ್ಪ ಕೊಗಪ್ಪ ಕೊಂಪಿ ಸರ್ಕಾರಿ ಪದವಿ ಪೂರ್ವ ಕಾಲೇಜು. ಹಗರಿಬೊಮ್ಮನಹಳ್ಳಿ: ರಾಮನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ 1 ಮತ್ತು 2, ಹಂಪಸಾಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಂಬ್ರಹಳ್ಳಿ ಗ್ರಾಮ ಪಂಚಾಯತಿ ಕಚೇರಿ, ಕೋಗಳಿ ಗ್ರಾಮ ಪಂಚಾಯತಿ ಕಚೇರಿ. ಕೊಟ್ಟೂರು: ಸರ್ಕಾರಿ ಪದವಿಪೂರ್ವ (ಬಾಲಕರ) ಕಾಲೇಜು, ಪೂರ್ವ ಭಾಗ, ಉಜ್ಜಿನಿ ರಸ್ತೆ.

ಹೊಸಪೇಟೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಿ.ಬಿ.ಎಸ್.) ಚಿತ್ತವಾಡಿಗಿ, ಕೊಠಡಿ 1 ಮತ್ತು 2. ಕಮಲಾಪುರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಮರಿಯಮ್ಮನಹಳ್ಳಿ ಸರ್ಕಾರಿ ಪ್ರೌಡಶಾಲೆ.

ಕೂಡ್ಲಿಗಿ: ತಾಲ್ಲೂಕು ಪಂಚಾಯಿತಿ ಕಚೇರಿ, ಗುಡೇಕೋಟೆ ಗ್ರಾಮ ಪಂಚಾಯ್ತಿ ಕಾರ್ಯಾಲಯ, ಹೊಸಹಳ್ಳಿ ಉನ್ನತಿಕರಣ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹರಪನಹಳ್ಳಿ ಸರ್ಕಾರಿ ಜೂನಿಯರ್ ಕಾಲೇಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.