ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿಕಿತ್ಸೆಗಿಂತ ಮನೋಸ್ಥೈರ್ಯ ಅಗತ್ಯ’

Last Updated 9 ಮೇ 2021, 7:12 IST
ಅಕ್ಷರ ಗಾತ್ರ

ಕೂಡ್ಲಿಗಿ: ‘ಕೊರೊನಾ ಸೋಂಕಿತರಿಗೆ ಚಿಕಿತ್ಸೆಗಿಂತ ಮನೋಸ್ಥೈರ್ಯ ಅಗತ್ಯ. ಆ ಕೆಲಸವನ್ನು ಪ್ರತಿ ದಿನ ಮಾಡುತ್ತಿದ್ದೇವೆ’

ಇದು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಶುಶ್ರೂಷಕಿ ಬಸಮ್ಮ ಗಂಗೆ ಅವರ ಮಾತು.

ಕೋವಿಡ್ ವಾರ್ಡಿನಲ್ಲಿ ಕೆಲಸ ಮಾಡುವುದಕ್ಕೆಂದೆ ನಮ್ಮ ನೇಮಕ ಮಾಡಿಕೊಳ್ಳಲಾಗಿತ್ತು. ಆರಂಭದಲ್ಲಿ ಇಲ್ಲಿ ಕೆಲಸ ಮಾಡುವಾಗ ಸ್ವಲ್ಪ ಭಯ ಇತ್ತು. ಆದರೆ, ಈಗ ಯಾವುದೇ ಅಳುಕಿಲ್ಲದೆ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿದ್ದೇನೆ. ಅನೇಕ ಬಾರಿ ಸೋಂಕಿತರು ತುರ್ತಾಗಿ ಬಂದಾಗ ಯಾವುದೇ ಪಿಪಿಇ ಕಿಟ್ ಹಾಕಿಕೊಳ್ಳದೆ ಹೋಗಿ ಅವರಿಗೆ ಆಮ್ಲಜನಕ ಒದಗಿಸುವುದು, ಮಾತ್ರೆ ನೀಡುತ್ತೇನೆ ಎಂದರು.

ರೋಗಿಗಳ ಜತೆ ಸಂತೋಷದಿಂದ ಕೆಲಸ ಮಾಡುತ್ತೇನೆ. ಸೋಂಕಿತರಿಗೆ ನೈತಿಕ ಬೆಂಬಲ, ಆತ್ಮವಿಶ್ವಾಸ ಮೂಡಿಸುತ್ತ ಉಪಚಾರ ಮಾಡುತ್ತೇನೆ. ವೈದ್ಯಧಿಕಾರಿ ಡಾ. ವಿನಯ್ ಕುಮಾರ್ ಮಾರ್ಗದರ್ಶನದಲ್ಲಿ ವೈದ್ಯರು ಸೂಚಿಸಿದ ಮಾತ್ರೆ, ಇಂಜೆಕ್ಷನ್ ಸಮಯಕ್ಕೆ ಸರಿಯಾಗಿ ಕೊಡುತ್ತೇನೆ. ಸೋಂಕಿತರ ಸೇವೆ ಮಾಡುವುದು ಒಂದು ಭಾಗ್ಯ ಎಂದು ನಂಬಿ ನಾನು ಸೇರಿದಂತೆ ರೇಖಾ, ಸಿತಾರ ಕೊರೊನಾ ವಾರ್ಡಿನ ಇತರೆ ಎಲ್ಲಾ ಸಿಬ್ಬಂದಿ ಕೆಲಸ ಮಾಡುತ್ತಿದ್ದೇವೆ ಎಂದು ಬಸಮ್ಮ ಗಂಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT